ಗ್ರಾಮೀಣರಿಗೂ ಕಾನೂನು ಶಿಕ್ಷಣ ಸಿಗಲಿ,  ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಬೆಳಗಲಿ ಆಶಯ

IMG-20251014-WA0014.jpg
Published on

ಹುಬ್ಬಳ್ಳಿ: ತಾಲೂಕಿನ ನೂಲ್ವಿಯಲ್ಲಿ ನೂತನವಾಗಿ ಪ್ರಾರಂಭವಾದ ಪಿ.ಸಿ. ಸಿದ್ದನಗೌಡ್ರ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಉದ್ಘಾಟನೆ ಮಂಗಳವಾರ ನೆರವೇರಿತು.

ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಕಾನೂನು ಶಿಕ್ಷಣವು ಗ್ರಾಮಾಂತರ ವಿದ್ಯಾರ್ಥಿಗಳಿಗೂ ಲಭಿಸುವಂತಾಗಬೇಕು. ರೈತರ ಮಕ್ಕಳು ಕೂಡ ವಕೀಲರು, ನ್ಯಾಯಾಧೀಶರಾಗಬೇಕು. ಇದೇ ಕಾರಣಕ್ಕೆ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಹೆಸರಲ್ಲಿ ಆರಂಭಿಸಿರುವ ಕಾನೂನು ಕಾಲೇಜು ಗ್ರಾಮೀಣರಲ್ಲಿ ಆಶಾಕಿರಣ ಮೂಡಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸುಷ್ಮಾ ಗದ್ಯಪ್ಪನವರ, ಕಾಲೇಜು ಉತ್ತಮ ಕಾನೂನು ಶಿಕ್ಷಣ ನೀಡಲು ಸನ್ನದ್ಧವಾಗಿದೆ ಎಂದರು.

ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷೆ ಅಶ್ವಿನಿ ನಾಯಕ್, ಉಪನ್ಯಾಸಕಿ ಉಮಾ ಸಫಾರೆ, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಪ ಪ್ರಾಚಾರ್ಯ ಐ.ವಿ. ಬೇಗೂರ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ನಾಗೋಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net