ನುಲಿಯ ಚಂದಯ್ಯ ಮಹಾಸಂಘ ಉದ್ಘಾಟನೆ

IMG_20251029_202924_429.jpg
Published on

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರ ಇಂದಿರಾನಗರದಲ್ಲಿ ನಮ್ಮ ಕರ್ನಾಟಕ ಕೊರಚ ನುಲಿಯ ಚಂದಯ್ಯ ಮಹಾಸಂಘದ ಶಾಖಾ ಕಚೇರಿಯನ್ನು ಬುಧವಾರ ಆರಂಭಿಸಲಾಯಿತು.

ಭಗತ್ ಸಿಂಗ್ ಸೇವಾ ಸಂಘದ ಅಧ್ಯಕ್ಷ ವಿಶಾಲ ಜಾಧವ, ಯುವ ಕಾಂಗ್ರೆಸ್‌ ನ ರಾಕೀಬ ಹುಸೇನ್ ದೇವಗಿರಿ ಹಾಗೂ ಸಮಾಜದ ಮುಖಂಡರು ಸಂಘದ ನಾಮಫಲಕ ಅನಾವರಣ ಮಾಡಿದರು.

ಮಾಜಿ ತಹಸೀಲ್ದಾರ್ ಕೆ. ಬಾಲಪ್ಪ, ರಾಜನಗೌಡ ಪಾಟೀಲ, ಬಸವರಾಜ ಬನ್ನಿಕಟ್ಟಿ, ದುರ್ಗಪ್ಪ ಬದಾಮಿ, ಗಂಗಪ್ಪ ಚಂದ್ರೊಳ್ಳಿ, ದುರ್ಗಪ್ಪ ಜೋಡಳ್ಳಿ, ರಮೇಶ ಕೆರೂರ, ದ್ಯಾಮವ್ವ ಪೂಜಾರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net