ನುಲಿಯ ಚಂದಯ್ಯರ ಕಾಯಕನಿಷ್ಠೆ ಶ್ಲಾಘನೀಯ

BLY- 31-4
ಬಳ್ಳಾರಿ ನಗರದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಮತ್ತು ಕೊರಚ, ಕೊರಮ, ಕೊರವ ಸಮುದಾಯಗಳ ಒಕ್ಕೂಟದ ವತಿಯಿಂದ ಗುರುವಾರ ಶಿವಶರಣ ನುಲಿಯ ಚಂದಯ್ಯ ಅವರ 916ನೇ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ ನಡೆಯಿತು
Published on

ಬಳ್ಳಾರಿ: ಬಸವಣ್ಣ ಅವರ ಕಾಲದಲ್ಲಿ ನಿಷ್ಠೆಯಿಂದ ಕಾಯಕವನ್ನು ಮಾಡಿದ ನುಲಿಯ ಚಂದಯ್ಯಅವರ ಕೊಡುಗೆ ಅಪಾರ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಜಿಲ್ಲಾಧ್ಯಕ್ಷ ಶಂಕರ್‌ಬಂಡೆ ವೆಂಕಟೇಶ್ ಹೇಳಿದರು.

ನಗರದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಮತ್ತು ಕೊರಚ, ಕೊರಮ, ಕೊರವ ಸಮುದಾಯಗಳ ಒಕ್ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶಿವಶರಣ ನುಲಿಯ ಚಂದಯ್ಯ ಅವರ 916ನೇ ಜಯಂತಿಯ ಬೃಹತ್ ಮೆರವಣಿಗೆಯಲ್ಲಿ ಮಾತನಾಡಿದರು.

ಚಂದಯ್ಯ ಅವರ ಕಾಯಕ ನಿಷ್ಠೆಯನ್ನು ನಾವು ನೀವು ಸೇರಿ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡೋಣ. ಮುಂದಿನ ಪೀಳಿಗೆಯಲ್ಲಿ ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಸುವುದರ ಮೂಲಕ ಇಂತಹ ಶರಣರ ಜಯಂತಿ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದರು.

ಸಂಘದ ಖಜಾಂಚಿ ರಮಣಪ್ಪ ಭಜಂತ್ರಿ ಮಾತನಾಡಿ, ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಅಸ್ತಿತ್ವಕ್ಕೆ ಬಂದ ನಂತರ ಸುಮಾರು ವರ್ಷಗಳ ಹೋರಾಟ ಮಾಡಿ ಸರ್ಕಾರ ಗಮನ ಸೆಳೆದು ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಸರ್ಕಾರಿ ವತಿಯಿಂದ ಆಚರಿಸಲು ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆ ಕರ್ನಾಟಕದಲ್ಲಿ ನಮ್ಮ ಜನಾಂಗದ ಹೆಮ್ಮೆಯ ವಿಷಯವಾಗಿದೆ. ಈ ಸಂಘವು ಎಲ್ಲರೂ ಸೇರಿಸಿಕೊಂಡು ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ ಎಂದು ವ್ಯಕ್ತಪಡಿಸಿದರು.

ಕೊಲ್ಲಾಪುರ ದೇವಸ್ಥಾನದಿಂದ ರಾಘವ ಕಲಾಮಂದಿರ ವರೆಗೆ ಮೆರವಣಿಗೆಯಲ್ಲಿ ಕಲಾಮೇಳ ತಂಡದೊಂದಿಗೆ ಜನರು ಭಾಗವಹಿಸಿದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಶ್ರೀನಿವಾಸ್, ಜಿಲ್ಲಾ ಖಜಾಂಚಿ ಕೆ.ರಂಗಸ್ವಾಮಿ, ನಗರ ಕಾರ್ಯದರ್ಶಿ ವೆಂಕಟೇಶ ಬಾಬು ಮತ್ತು ನಿಕಟ ಪೂರ್ವ ಅಧ್ಯಕ್ಷ ಕೆ.ಸಂತೋಷ, ಜಿಲ್ಲಾ ಉಪಾಧ್ಯಕ್ಷ ಕೆ.ನಾಗರಾಜ್, ತಿಪ್ಪಣ್ಣ ಭಜಂತ್ರಿ, ಮೀನಪ್ಪ, ಪೊಲೀಸ್ ದೇವಣ್ಣ, ಚಟ್ನಿ ಹನುಮಂತಪ್ಪ, ಕೆ .ರವಣಪ್ಪ, ತಿಮ್ಮಯ್ಯ, ಸುಧಾಕರ್, ಪವನ್, ಬೋಗಿರಾಜ್, ಎಚ್.ಕೆ.ಹನುಮಂತಪ್ಪ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net