ಬದಲಾವಣೆಗೆ ಶ್ರಮಿಸಿದ ನುಲಿಯ ಚಂದಯ್ಯ

19 mdg 3
Published on

ಮುಂಡರಗಿ: ಪಟ್ಟಣದ ನುಲಿಯ ಚಂದಯ್ಯ ವೃತ್ತದಲ್ಲಿ ಭಜಂತ್ರಿ ಸಮಾಜದಿಂದ ಸೋಮವಾರ ಶ್ರೀ ಶಿವಶರಣ ನುಲಿಯ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಆದಿಶಕ್ತಿ ಹುಲಿಯಮ್ಮ ದೇವಿ ಕೊರಮ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಕೊರಮ ಸಮಾಜದ ಜಿಲ್ಲಾ ಉಪಾಧ್ಯಕ್ಷ ರಾಮು ಭಜಂತ್ರಿ ಮಾತನಾಡಿ, ನುಲಿಯ ಚಂದಯ್ಯ ಕಾಯಕ ಯೋಗಿಯಾಗಿದ್ದಾರೆ. ನಿಷ್ಠೆಯ ಕಾಯಕದ ಮೂಲಕ ತಮ್ಮ ಬದುಕು ನಡೆಸಿದ್ದರು. ಕಾಯಕ ಮತ್ತು ದಾಸೋಹದ ಮೂಲಕ ಸಮಾಜದಲ್ಲಿ ಬದಲಾವಣೆ ತರುವಂತ ಕೆಲಸ ಮಾಡಿದ್ದರು ಎಂದರು. ಮುಂಡರಗಿ ಶಹರ ಅಧ್ಯಕ್ಷ ಮಾರುತೆಪ್ಪ ಭಜಂತ್ರಿ, ಶಿವಾನಂದ ಭಜಂತ್ರಿ, ಮಂಜುನಾಥ ಭಜಂತ್ರಿ, ಸುರೇಶ ಭಜಂತ್ರಿ, ಮಂಜುನಾಥ ಕಟ್ಟಿಮನಿ, ಶಿವಕುಮಾರ ಭಜಂತ್ರಿ, ಈರಣ್ಣ ಭಜಂತ್ರಿ, ಪರಶುರಾಮ ಭಜಂತ್ರಿ, ಯಮನಪ್ಪ ಭಜಂತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net