ಧರ್ಮ ಕಾರ್ಯಗಳಿಂದ ನೆಮ್ಮದಿ ಸಾಧ್ಯ

2 bagina 2
Published on
  • ನುಗ್ಗೇಹಳ್ಳಿ : ಧರ್ಮ ಕಾರ್ಯಗಳಿಂದ ಮಾತ್ರ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಹೇಳಿದರು.
  • ಹೋಬಳಿಯ ದೇವಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾತೆಯರಿಗೆ ಶುಕ್ರವಾರ ಬಾಗಿನ ಅರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
  • ಲಕ್ಕಮ್ಮದೇವಿಯ ಅನುಗ್ರಹದಿಂದ ಆದಷ್ಟು ಬೇಗ ಮಳೆ ಸುರಿಯುವಂತಾಗಲಿ. ರೈತರನ್ನು ಕಾಪಾಡಲಿ. ನಾಡಿಗೆ ಶಾಂತಿ, ನೆಮ್ಮದಿ ದೊರೆಯಲಿ. ದೇಶ ಸಮೃದ್ಧಿಯಾಗಲಿ ಎಂದು ವಿಶೇಷ ಪೂಜೆ, ಹೋಮ ಮಾಡಲಾಗಿದೆ. ದೇವಿ ಕೃಪೆಯೇ ಎಲ್ಲರನ್ನೂ ರಕ್ಷಿಸಬೇಕಿದೆ ಎಂದರು.
  • ಮಿತಿ ಮೀರಿದ ಮಾಲಿನ್ಯ:
  • ಕೆರೆ, ಕಟ್ಟೆ- ಬಾವಿಗಳನ್ನು ಮುಚ್ಚಿ ಅರಣ್ಯ ನಾಶ ಮಾಡಲಾಗಿದೆ. ಮಿತಿ ಮೀರಿದ ಪರಿಸರ ಮಾಲಿನ್ಯ ಮಾಡಿದ ಕಾರಣ ಇಂದು ಬರಗಾಲ ಎದುರಿಸುವಂತಾಗಿದೆ. ಸಕಾಲದಲ್ಲಿ ಮಳೆ ಬೀಳುತ್ತಿಲ್ಲ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
  • ಮಾನವನ ಅವಶ್ಯಕತೆಗಳನ್ನು ಈಡೇರಿಸಲು ಹಳ್ಳ, ಕೊಳ್ಳ, ರಸ್ತೆ ಬದಿ ಗುಂಡು ತೋಪುಗಳನ್ನು ಮಾಡಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಆಗಬೇಕು. ಹಾಗಿದ್ದರೆ ಮಾತ್ರ ಮಾನವ ಸಂಕುಲ, ಪ್ರಾಣಿ ಪಕ್ಷಿಗಳ ಸಂತತಿ ಉಳಿಸಲು ಸಾಧ್ಯವಿದೆ ಎಂದು ಚಂದ್ರಶೇಖರ ಗುರೂಜಿ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net