

ಮೈಸೂರು: ವೀರವನಿತೆ ರಾಣಿಚೆನ್ನಮ್ಮ ಸ್ವಯಂ ಸೇವಾ ಸಂಘ, ಅನಿಕೇತನ ಸೇವಾ ಟ್ರಸ್ಟ್ ಸೇರಿದಂತೆ ನಾನಾ ಸಂಘಟನೆಗಳ ವತಿಯಿಂದ ಜ.28ರಂದು ಸಂಜೆ 6 ಗಂಟೆಗೆ ನಿವೇದಿತನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ‘ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನೆನಪುಗಳ ನುಡಿಮಲ್ಲಿಗೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ, ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಅಂಕಣಕಾರರಾದ ಕುಸುಮಾ ಆಯರಹಳ್ಳಿ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಆಯರಹಳ್ಳಿ ಪಿ.ವಿರೂಪಾಕ್ಷ, ಜೆ.ಎಸ್.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.