

ರಾಯಬಾಗ: ಪಟ್ಟಣದಲ್ಲಿ ಫೆ.19ರಂದು ಆಯೋಜಿಸಿರುವ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿ, ರಾಯಬಾಗ ಕ್ಷೇತ್ರ ಸಾಹಿತ್ಯ ಪರಂಪರೆಯ ನೆಲೆಯಾಗಿದೆ. ಎಲ್ಲ ಇಲಾಖೆಯವರು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಕೂಡಿಕೊಂಡು, ಪ್ರತಿ ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಸಾಹಿತ್ಯ ಸಮ್ಮೇಳನದ ದಿನದಂದು ಪಟ್ಟಣದ ಎಲ್ಲ ನಾಗರಿಕರು ತಮ್ಮ ಮನೆ ಅಂಗಳದಲ್ಲಿ ರಂಗೋಲಿ ಬಿಡಿಸಿ, ಮನೆ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂದರು. ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ತಾಲೂಕಿನ ಹಿರಿಯರನ್ನು ಗುರುತಿಸಿ ಸಮ್ಮೇಳನದಲ್ಲಿ ಸತ್ಕರಿಸುವ ಕಾರ್ಯ ನಡೆಯಬೇಕೆಂದರು.
ಶಂಕರ ಕ್ಯಾಸ್ತಿ ಸಮ್ಮೇಳನದ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು. ಪಪಂ ಅಧ್ಯಕ್ಷ ಅಶೋಕ ಅಂಗಡಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಪಾಟೀಲ, ಕುಡಚಿ ಹೋಬಳಿ ಅಧ್ಯಕ್ಷ ಸಂತೋಷ ಸನದಿ, ತಾಪಂ ಇಒ ಅರುಣ ಮಾಚಕನೂರ, ಸಾಹಿತಿ ಶಿವಾನಂದ ಬೆಳಕೂಡ, ಬಸವರಾಜ ಸನದಿ, ಅನಿಲ ಶೆಟ್ಟಿ, ಅಧಿಕಾರಿಗಳಾದ
ಡಾ.ಎಸ್.ಎಂ.ಪಾಟೀಲ, ಆರ್.ಬಿ.ಮನವಡ್ಡರ, ಎಸ್.ಆರ್.ಮಾಂಗ, ಬಸವರಾಜಪ್ಪ ಆರ್., ರವಿ ಸಂಕನಗೌಡರ, ಡಾ.ಎಂ.ಬಿ.ಪಾಟೀಲ, ಕಲ್ಪನಾ ಕಾಂಬಳೆ, ವೈ.ಎಸ್.ಸನಮನಿ, ಭಾರತಿ ಕಾಂಬಳೆ, ಪ್ರಕಾಶ ಮಾನೆ, ಎಂ.ಪಿ.ಜಿರಗ್ಯಾಳ, ಟಿ.ಎಸ್.ವಂಟಗೂಡಿ, ಸುಕುಮಾರ ಕಾಂಬಳೆ, ಕುಮಾರ ಅವಳೆ, ವಿನಾಯಕ ಭಾಟೆ ಇತರರಿದ್ದರು.