

85ನೇ ಸಾಹಿತ್ಯ ಸಮ್ಮೇಳನ ವಿಚಿತ್ರ ವೈರುಧ್ಯವೊಂದಕ್ಕೆ ಸಾಕ್ಷಿಯಾಯಿತು. ನಾವು ಕನ್ನಡಿಗರು ಎಂದು ಎದೆಯುಬ್ಬಿಸಿ ಬಂದಿದ್ದ ಗಡಿಭಾಗದ ಕನ್ನಡಿಗರು, ತಮ್ಮ ನೋವು ತೋಡಿಕೊಳ್ಳಲು ವೇದಿಕೆಯಲ್ಲಿ ಅವಕಾಶ ಸಿಗಲಿಲ್ಲವೆಂದು ಬೇಸರದಿಂದ ಹೊರಟು ಹೋದರು.
ತೆಲಂಗಾಣ ಕೃಷ್ಣ ಮಂಡಲ ಭಾಗದ 150ಕ್ಕೂ ಹೆಚ್ಚು ಕನ್ನಡಾಭಿಮಾನಿಗಳು ಗುರುವಾರ ಮಧ್ಯಾಹ್ನವೇ ಬೇಸರದಿಂದ ಭಾರದ ಹೆಜ್ಜೆ ಇಡುತ್ತ ತಮ್ಮೂರ ಕಡೆ ಪ್ರಯಾಣ ಬೆಳೆಸಿದರು. ಹೊರಡುವ ಮುನ್ನ ವಿಜಯವಾಣಿ ಜತೆ ಮಾತನಾಡಿದ ‘ನಾರಾಯಣಪೇಟೆ ಕನ್ನಡ ಸಂಘ’ದ ಪ್ರಮುಖರು, ಸಮ್ಮೇಳನದಲ್ಲಿ ಹೊರರಾಜ್ಯದ ಕನ್ನಡಿಗರ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಕೊಡಲಿಲ್ಲ ಎಂದು ಬೇಸರ ತೋಡಿಕೊಂಡರು.
‘ಎಲ್ಲಿ ನಮ್ಮ ಗೋಳು ತೋಡಿಕೊಳ್ಳಬೇಕೆಂದು ಅರ್ಥವಾಗುತ್ತಿಲ್ಲ. ಗಡಿನಾಡು ಕನ್ನಡ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ನಾವು ಹೇಳಿಕೊಳ್ಳಬೇಕಿತ್ತು’ ಎಂದು ಅರುಣ್ ದೀಕ್ಷಿತ್ ಹೇಳಿದರು.