ವಿಮಾನ ನಿಲ್ದಾಣದಲ್ಲಿ ಅಣುಕು ಪ್ರದರ್ಶನ

airport
ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಂಟಿ-ಹೈಜಾಕ್ ಅಣುಕು ಪ್ರದರ್ಶನದ ದೃಶ್ಯಗಳು
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭದ್ರತೆ ಮತ್ತು ತುರ್ತು ಪ್ರತಿಕ್ರಿಯೆ ಭಾಗವಾಗಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಂಟಿ-ಹೈಜಾಕ್ ಅಣುಕು ಪ್ರದರ್ಶನ ನಡೆಸಿತು.
ಸುರಕ್ಷತೆ ಖಾತ್ರಿ: ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಈ ಅಣುಕು ಪ್ರದರ್ಶನ ನಿರ್ಣಾಯಕ ನಿಲುವು ಹೊಂದಿರುತ್ತದೆ. ವಿಮಾನ ನಿಲ್ದಾಣದ ಯುದ್ಧತಂತ್ರದ ಸಿದ್ಧತೆಯನ್ನು ನಿರ್ಣಯಿಸಲು ಮತ್ತು ಸುಧಾರಿಸಲು ವಿನ್ಯಾಸಗೊಳಿಸಲಾದ ವಿವಿಧ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್ ತಿಳಿಸಿದರು.ತರಬೇತಿ ಪಡೆದ ಸಮಾಲೋಚಕರು, ವಿಮಾನ ಆಗಮನದ ನಂತರ ಅಪಹರಣಕಾರರೊಂದಿಗೆ ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿಭಾಹಿಸುವ ಗುರಿ ಹೊಂದಿರುತ್ತಾರೆ, ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯು ಮಧ್ಯಪ್ರವೇಶಿಸಲು ಮುಂದಾಗುತ್ತದೆ. ಬೆದರಿಕೆಯ ಮುಂಜಾಗ್ರತೆ ಮತ್ತು ಪರಿಣಾಮಕಾರಿ ನಿಯಂತ್ರಣದಲ್ಲಿ ಕಡಿಮೆ ಹಾನಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ ಎಂದು ಸಿಇಒ ಸ್ಪಷ್ಟಪಡಿಸಿದರು. ಈ ಅಣುಕು ಪ್ರದರ್ಶನ ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು ನಮ್ಮ ಪ್ರತಿಕ್ರಿಯೆ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು, ಅಂತರ್-ಇಲಾಖೆಯ ಸಮನ್ವಯವನ್ನು ಹೆಚ್ಚಿಸಲು ಮತ್ತು ನೈಜ-ಜೀವನದ ಸನ್ನಿವೇಶಗಳಿಗೆ ಹೇಗೆ ಸ್ಪಂದನೆ ಸಿಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು. ಯಾವುದೇ ಪರಿಸ್ಥಿತಿಯಲ್ಲಿ ಎಲ್ಲ ವಿಮಾನ ನಿಲ್ದಾಣ ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡುವ ಸುರಕ್ಷಿತ ವಾತಾವರಣ ನಿರ್ಮಿಸಿರುವ ಗುರಿ ಹೊಂದಲಾಗಿದೆ ಎಂದರು.
ಹೈಜಾಕ್ ಕೃತಕ ಸನ್ನಿವೇಶ: ಅಪಹರಿಸಿದ ವಿಮಾನ ಏರ್‌ಪೋರ್ಟ್‌ಗೆ ಬಂದು ಇಳಿದ ಕೃತಕ ಸನ್ನಿವೇಶವನ್ನು ನಿರ್ಮಾಣ ಮಾಡಲಾಗಿತ್ತು. ಇದು ಏರೋಡ್ರೋಮ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಕಮಿಟಿ (ಎಇಎಂಸಿ) ಅನ್ನು ತಕ್ಷಣವೇ ಸಕ್ರಿಯಗೊಳಿಸಿತು. ಡೈರೆಕ್ಟರೇಟ್ ಜನರಲ್ ಆ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಸಿಟಿ ಆಸ್ಪತ್ರೆಗಳು, ಭಾರತೀಯ ವಾಯುಪಡೆ (ಐಎಎ್), ಪೊಲೀಸ್, ಪೊಲೀಸ್, ಏರ್ ಟ್ರಾಫಿಕ್ ಸರ್ವೀಸಸ್ ಕಂಟ್ರೋಲ್ (ಎಟಿಸಿ), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಸ್ಥಳೀಯ ಸಮುದಾಯಗಳು, ನಾಗರಿಕ ಸಂಘ ಸಂಸ್ಥೆಗಳು, ವಾಯುಯಾನ ಸಂಸ್ಥೆಗಳು ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳ ಸಹಯೋಗದಲ್ಲಿ ಈ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net