ಕುಂದಗೋಳ ಕ್ಷೇತ್ರ ಮಾದರಿ ಮಾಡುವ ಸಂಕಲ್ಪ

h17-mr patil
Published on

ಹುಬ್ಬಳ್ಳಿ: ಇಲ್ಲಿನ ಮಿನಿವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರ ಜನಸಂಪರ್ಕ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಲಾಯಿತು.

ಕ್ಷೇತ್ರದ ಹಿರಿಯ ನಾಗರಿಕರು, ಈ ಕಾರ್ಯಾಲಯವನ್ನು ಶಾಸಕರ ಸಮ್ಮುಖದಲ್ಲಿ ಉದ್ಘಾಟಿಸಿದರು. ಬಳಿಕ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿತು. ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಆರ್. ಪಾಟೀಲ, ರಾಜ್ಯದಲ್ಲಿಯೇ ಕುಂದಗೋಳ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಹೊತ್ತಿದೆ. ನಮ್ಮ ಕ್ಷೇತ್ರದಲ್ಲಿ ರೈತಾಪಿ ವರ್ಗವೇ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಮಾದರಿ ಮಾಡುವ ಸಂಕಲ್ಪ ಇಟ್ಟುಕೊಂಡಿದ್ದೇನೆ. ಹೀಗಾಗಿ ಜನರ ಅಹವಾಲು ಸ್ವೀಕರಿಸಲು ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ಜನಸಂಪರ್ಕ ಕಚೇರಿ ತೆರೆಯಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಮಾಲತೇಶ ಶಾಗೋಟಿ, ರವಿಗೌಡ ಪಾಟೀಲ, ನಿಂಗನಗೌಡ ಮರಿಗೌಡ್ರ, ಚಂದ್ರಪ್ಪ ಬೆನ್ನಿ, ಉಮೇಶ ಕುಸುಗಲ್, ಲಿಂಗರಾಜ ಮೆಣಸಿನಕಾಯಿ, ಪ್ರತಾಪಗೌಡ ಪಾಟೀಲ, ಎಸ್.ಡಿ. ಮಾಳಗಿ, ವಿಲಾಸ್ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net