ಎನ್ನೆಸ್ಸೆಸ್ ನಾಯಕತ್ವ ಬೆಳೆಸುವಲ್ಲಿ ಸಹಕಾರಿ

ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಎಂ.ಬಸವರಾಜ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಎಚ್.ರಾಮಕೃಷ್ಣ, ಐಕ್ಯುಎಸಿ ಸಂಚಾಲಕಿ ಡಾ.ಶಾಂತಲಾ, ಗ್ರಾಪಂ ಪ್ರಥಮ ದರ್ಜೆ ಸಹಾಯಕ ಪರಮೇಶ್ವರ, ಪ್ರಮುಖರಾದ ಪಂಪನಗೌಡ, ಡಾ.ಶಶಿಕಾಂತ, ಈಡಿಗ ಮುರುಳಿ ಶಂಕರಗೌಡ ಇತರರಿದ್ದರು.

Published on

ಕುರುಗೋಡು: ಪ್ರತಿಯೊಬ್ಬ ಶಿಬಿರಾರ್ಥಿ ಸೇವಾ ಮನೋಭಾವ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಲ್ಲುಕಂಬ ಗ್ರಾಪಂ ಅಧ್ಯಕ್ಷ ಎಂ.ಬಸವರಾಜ ಹೇಳಿದರು.

ಕಲ್ಲುಕಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕುರುಗೋಡು ಪ್ರಥಮ ದರ್ಜೆ ಕಾಲೇಜಿನಿಂದ ಶನಿವಾರ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ. ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ.ಎಚ್.ರಾಮಕೃಷ್ಣ ಮಾತನಾಡಿ, ವಾರ್ಷಿಕ ವಿಶೇಷ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿವೆ. ಶ್ರಮದಾನದ ಜತೆ ಸೇವಾ ಮನೋಭಾವ ಬೆಳೆಸಿಕೊಳ್ಳಿ ಎಂದು ತಿಳಿಸಿದರು.

ಐಕ್ಯುಎಸಿ ಸಂಚಾಲಕಿ ಡಾ.ಶಾಂತಲಾ, ಗ್ರಾಪಂ ಪ್ರಥಮ ದರ್ಜೆ ಸಹಾಯಕ ಪರಮೇಶ್ವರ, ರೈತ ಸಂಘದ ಸದಸ್ಯ ಪಂಪನಗೌಡ, ಶಿಬಿರಾಧಿಕಾರಿಗಳಾದ ಡಾ.ಶಶಿಕಾಂತ, ಈಡಿಗ ಮುರುಳಿ ಶಂಕರಗೌಡ, ಶಿಬಿರಾರ್ಥಿಗಳಾದ ಮುತ್ತಪ್ಪ, ಡಾ.ಮಲ್ಲಿಕಾರ್ಜುನ, ಎಚ್.ಲಕ್ಷ್ಮೀಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net