ಎನ್‌ಎಸ್‌ಎಸ್ ಘಟಕ ವಾರ್ಷಿಕ ಶಿಬಿರ

New Project (9)
Published on

ಬಂಟ್ವಾಳ: ಬೊಂಡಾಲ ಸ.ಹಿ.ಪ್ರಾ.ಶಾಲೆಯಲ್ಲಿ ಬಿ.ಮೂಡ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಶನಿವಾರ ಉದ್ಘಾಟಿಸಿದರು.

ಬಿ.ಮೂಡ ಪ.ಪೂ. ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯಶೋದಾ ಮಧ್ವ, ಬೊಂಡಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ, ಮುಖ್ಯಶಿಕ್ಷಕಿ ರೇಖಾ ಸಿ.ಎಚ್. ಉಪಸ್ಥಿತರಿದ್ದರು.

ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿದರು. ಸಹಶಿಬಿರಾಧಿಕಾರಿ ಹೇಮಾ ಕೆ. ವಂದಿಸಿದರು. ಶಿಬಿರಾಧಿಕಾರಿ ದಾಮೋದರ್ ನಿರೂಪಿಸಿದರು. ಸಹ ಶಿಬಿರಾಧಿಕಾರಿ ಇರ್ಷಾದ್ ಸಹಕರಿಸಿದರು. ಉಪನ್ಯಾಸಕರಾದ ಲವೀನಾ ಶಾಂತಿ ಲೋಬೋ, ಸೌಮ್ಯಾ, ಭಾರತಿ, ಜಯಲೀಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net