ಸೇಡಿಯಾಪಿನಿಂದ ವಿನಾಯಕನಗರದ ವರೆಗೆ ನಡೆದ ಬೃಹತ್ ಸ್ಚಚ್ಚತಾ ಕಾರ್ಯಕ್ರಮ

PTR_1 SEP_4
Published on

ಪುತ್ತೂರು: ಸ್ವಚ್ಚತೆ ಎಲ್ಲೆಡೆ ಇರಬೇಕು, ಸ್ವಚ್ಚತೆ ಇರುವಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಮಾತ್ರವಲ್ಲದೆ ಸ್ವಚ್ಚತೆಯಿದ್ದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಹೇಳಿದರು.

ಅವರು ಕೋಡಿಂಬಾಡಿ ಗ್ರಾಪಂ ಮತ್ತು ವಿವೇಕಾನಂದ ಕಾನೂನು ಕಾಲೇಜು ಎನ್‌ಎಸ್‌ಎಸ್ ಘಟಕ ಇದರ ವತಿಯಿಂದ ಕೋಡಿಂಬಡಿ ಗ್ರಾಮದ ಸೇಡಿಯಾಪಿನಿಂದ ವಿನಾಯಕನಗರದ ವರೆಗೆ ನಡೆದ ಬೃಹತ್ ಸ್ಚಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವದೆಲ್ಲೆಡೆ ಸ್ವಚ್ಚತೆಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತಿದೆ, ನಮ್ಮ ಗ್ರಾಮ, ನಮ್ಮ ಪರಿಸರ ಸ್ವಚ್ಚವಾಗಿದ್ದರೆ ನಮಗೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಪೂಜಾರಿಯವರು ಹೇಳಿದರು.

ಗ್ರಾಪಂ ಸದಸ್ಯೆ ಪೂರ್ಣಿಮಾ ಯತೀಶ್ ಶೆಟ್ಟಿ, ಜಗನ್ನಾಥ ಶೆಟ್ಟಿ ನಡುಮನೆ, ಕೋಡಿಂಬಾಡಿ ಸರಕಾರಿ ಹಿ ಪ್ರಾ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ಶೇಖರ ಜೇಡರಪಾಲು, ವಿವೇಕಾನಂದ ಕಾಲೇಜು ಎನ್‌ಎಸ್‌ಎಸ್ ಘಟಕದ ಸಂಯೋಜಕ ಲಕ್ಷ್ಮೀಕಾಂತ್, ಸ್ಥಳೀಯ ಮುಖಂಡರಾದ ಯೋಗೀಶ್ ಸಾಮಾನಿ, ರಮೇಶ್, ಸುದೇಶ್ ಶೆಟ್ಟಿ, ದಾಮೋಧರ್, ಇಬ್ರಾಹಿಂ ಸೇಡಿಯಾಪು, ದಾಸಪ್ಪ ಗೌಡ, ಕುಮಾರನಾಥ ಎಸ್, ಸೇಡಿಯಾಪು ಫ್ರೆಂಡ್ಸ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net