ಸಮಾಜಮುಖಿ ಕೆಲಸಕ್ಕೆ ಎನ್‌ಎಸ್‌ಎಸ್ ಉತ್ತೇಜನ

17 bannur 1
ಬನ್ನೂರಿನ ಸಮೀಪದ ಹನುಮನಾಳು ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ ಕಾರ್ಯಕ್ರಮದಲ್ಲಿ ಡಾ.ರೇವಣ್ಣ, ಎನ್.ಎಂ.ರಾಮಚಂದ್ರ, ಗೂಳೇಗೌಡ, ಧರಣೇಶ್, ಸಿದ್ದೇಗೌಡ, ದಯಾನಂದ್ ಪಟೇಲ್, ಶಿವಕುಮಾರ್, ಮಲ್ಲಿಕಾರ್ಜುನಸ್ವಾಮಿ, ಎಚ್.ಎಂ.ಕುಮಾರ್, ಲೋಕೇಶ್, ಸತೀಶ್, ಉಪನ್ಯಾಸಕ ರಘು, ಅಗ್ನಿ ಶಾಮಕ ಅಧಿಕಾರಿ ಲೋಕೇಶ್, ಸಿ.ತಮ್ಮಣ್ಣ ಇದ್ದರು.
Published on

ಬನ್ನೂರು: ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಸಮಾಜಮುಖಿ ಕೆಲಸ ಮಾಡಲು ಉತ್ತೇಜನ ನೀಡುತ್ತದೆ. ಇಂತಹ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಸಾಮಾಜಿಕ, ವೈಯಕ್ತಿಕ, ಸಾಮೂಹಿಕ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತಹ ಸ್ಥೈರ್ಯ ಪಡೆಯುತ್ತಾರೆ ಎಂದು ಬಿಜೆಪಿ ಮುಖಂಡ ಡಾ.ರೇವಣ್ಣ ತಿಳಿಸಿದರು.

ಪಟ್ಟಣದ ಸಮೀಪದ ಹನುಮನಾಳು ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ‘ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ, ಪಟ್ಟಣ, ನಗರ ಪ್ರದೇಶದಲ್ಲಿ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆತ್ಮಸ್ಥೈರ್ಯವನ್ನು ಪಡೆಯಬೇಕು. ಶಿಬಿರದಲ್ಲಿ ಭಾಗವಹಿಸುವಂತ ಎಲ್ಲ ವಿದ್ಯಾರ್ಥಿಗಳು ದೇಶ ಕಟ್ಟುವಂತ ಕೆಲಸದಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಬಿರವನ್ನು ಆಯೋಜನೆ ಮಾಡುವುದರಿಂದ ಹಳ್ಳಿ ಪ್ರದೇಶದಲ್ಲಿ ಜನರ ಜೀವನವನ್ನು ತಿಳಿದು ಅದರ ಅಭಿವೃದ್ಧಿಗೆ ಮುಂದಿನ ದಿನದಲ್ಲಿ ಯುವ ಪೀಳಿಗೆ ಎನು ಮಾಡಬಹುದು ಎನ್ನುವಂತ ಮಹತ್ವದ ಆಲೋಚನೆಯನ್ನು ಮಾಡುವ ಮೂಲಕ ಗ್ರಾಮದ ಏಳಿಗೆಗೆ ಶ್ರಮಿಸುವಂತಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಟ್ಟಲು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವಂತಹ ದೃಢತೆ ಈ ಶಿಬಿರದಿಂದ ವಿದ್ಯಾರ್ಥಿಗಳಿಗೆ ದೊರಕಲಿದೆ ಎಂದು ತಿಳಿಸಿದರು.

ಶಿಬಿರಾಧಿಕಾರಿ ದಯಾನಂದ ಪಟೇಲ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಸಮಾಜಮುಖಿಯಾಗಿ ಕೆಲಸ ಮಾಡುವಂತಹ ಮನೋಭಾವ ಬೆಳೆಸಿಕೊಂಡು, ಉತ್ತಮ ವಾತಾವರಣ ನಿರ್ಮಾಣಕ್ಕೆ ಶಿಬಿರ ಸಹಕಾರಿಯಾಗಲಿದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೂಳೇಗೌಡ, ಶಿಬಿರಾಧಿಕಾರಿ ಧರಣೇಶ್, ಸಿದ್ದೇಗೌಡ, ದಯಾನಂದ್ ಪಟೇಲ್, ಶಿವಕುಮಾರ್, ಮಲ್ಲಿಕಾರ್ಜುನಸ್ವಾಮಿ, ಎಚ್.ಎಂ.ಕುಮಾರ್, ಲೋಕೇಶ್, ಸತೀಶ್, ಉಪನ್ಯಾಸಕ ರಘು, ಅಗ್ನಿಶಾಮಕ ಅಧಿಕಾರಿ ಲೋಕೇಶ್, ಸಿ.ತಮ್ಮಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net