

ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ರೋವರ್ಸ್ ಮತ್ತು ರೋವರ್ಸ್ ಹಾಗೂ ಯೂತ್ ರೆಡ್ ಕ್ರಾಸ್ ವತಿಯಿಂದ ಗಾಂಽ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಆಚರಣೆ ನಡೆಯಿತು.
ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಾರಣ್ಣ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಚನ ಬೋಽಸಿದರು. ಸ್ವಚ್ಚತಾ ಹೀ ಸೇವಾ ಅಂಗವಾಗಿ ಕಾಲೇಜು ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಗಾಂಽ ಜಯಂತಿಯ ಪ್ರಯುಕ್ತ ಪಾಣಾಜೆ ಅಂಗನವಾಡಿಯಲ್ಲಿ ಒಂದು ದಿನದ ಶ್ರಮದಾನ ನಡೆಸಿದರು.
ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಗಾಂಽಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಭಾವಚಿತ್ರಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ರೋವರ್ಸ್ ಮತ್ತು ರೆಂಜರ್ಸ್ ಘಟಕ ನಾಯಕಿ ದಿವ್ಯ ಕುಮಾರಿ ನಿರೂಪಿಸಿದರು.