

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಪಿಪಿಜಿ ಕಲಾ ಮಹಾವಿದ್ಯಾಲಯ ಎನ್ಎಸ್ಎಸ್ ಟಕ ವತಿಯಿಂದ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಮಾಹಾವಿದ್ಯಾಲಯದಲ್ಲಿ ಶನಿವಾರ ಏಡ್ಸ್ ತಡೆಗಟ್ಟು ಕುರಿತು ಅರಿವು ಕಾರ್ಯಕ್ರಮ ಜರುಗಿತು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿ ಡಾ. ಅರುಂಧತಿ ಕುಲಕಣಿರ್ ಮಾತನಾಡಿ, ಹೆಚ್.ಐ.ವಿ. ಏಡ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಎಲ್ಲ ಯುವಕರು ಕಾಲೇಜ ವಿದ್ಯಾಥಿರ್ಗಳು ತ್ವರಿತಗತಿಯಲ್ಲಿ ಹೆಚ್.ಐ.ವಿ. ಬಗ್ಗೆ ಪ್ರಚಾರ ಕೈಗೊಂಡು, ಬೀದಿ ನಾಟಕ ಹಾಗೂ ಸಂಗೀತ ಕಲಾ ಪ್ರದರ್ಶನಗಳ ಮೂಲಕ ಹೆಚ್.ಐ.ವಿ. ಏಡ್ಸ್ ಅರಿವನ್ನು ಸಮುದಾಯದಲ್ಲಿ ಮೂಡಿಸಬೇಕು. ಯುವಕರು ಸಂಯಮದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಧೃಢ ಆರೋಗ್ಯವನ್ನು ಹೊಂದಿ ಸಮೃಧ್ದ ಭಾರತವನ್ನು ನಿರ್ಮಾಣ ಮಾಡಲು ಕೈಗೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಆರ್.ಎಸ್. ದಾನರೆಡ್ಡಿ, ವಿದ್ಯಾಥಿರ್ಗಳು ಯವ್ವನದಲ್ಲಿ ತಮ್ಮ ಜೀವನವನ್ನು ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆಗಳನ್ನು ರೂಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಏಡ್ಸ ತಡೆಗಟ್ಟುವ ಜಾಗರತಿ ಕುರಿತು ನಾಟಕ ಪ್ರದರ್ಶನ ನಡೆಯಿತು. ಡಾ. ನಿಂಗೋಜಿ, ಪ್ರೊ.ಮಂಜುಳಾ ಹೊಂಬಾಳಿ, ಬಸವರಾಜ ಲಾಳಗಟ್ಟಿ ಇತರರು ಇದ್ದರು.