ಜ್ಞಾನದ ದಾಸೋಹ ಹಂಚಿಕೆಯಾಗಲಿ: ವಿಶ್ವನಾಥ ಜಿ.

04GDG03
ಹಾತಲಗೇರಿ ಗ್ರಾಮದಲ್ಲಿ ಜರುಗಿದ ಎನ್​ಎಸ್​ಎಸ್​ ಶಿಬಿರದಲ್ಲಿ ಎನ್​ಎಸ್​ಎಸ್​ ಶಿಬಿರಾಥಿರ್ಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಸಿ.ಬಿ. ರಣಗಟ್ಟಿಮಠ ಅವನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಪೂಜಾರ, ಶರತಕುಮಾರ ದರಬಾರ, ಎಂ. ಎನ್​. ಜಾಲಮ್ಮನವರ ಸುನೀಲಕುಮಾರ ಮಾಡಲಗೇರಿ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೂಂದಿಲ್ಲ. ಅದನ್ನು ದಾಸೋಹದ ರೂಪದಲ್ಲಿ ಹಂಚಿಕೊಳ್ಳುವುದಕ್ಕಿಂತ ಮಹತ್ತರ ಕಾರ್ಯ ಮತ್ತೂಂದಿಲ್ಲ ಎಂದು ಜೆಟಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವಿಶ್ವನಾಥ ಜಿ. ಹೇಳಿದರು.
ಹಾತಲಗೇರಿ ಗ್ರಾಮದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಕೆಎಲ್​ಇ, ಗ್ರಾಪಂ ಸಹಯೋಗದಲ್ಲಿ ಭಾನುವಾರ ರಾತ್ರಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆಯ ವಾಷಿರ್ಕ ವಿಶೇಷ ಶಿಬಿರದಲ್ಲಿ "ಕಾನೂನು ಅರಿವು ನೆರವಿಗಾಗಿ ಯುವಜನತೆ ಕಾರ್ಯಕ್ರಮ' ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಮಾಜದಲ್ಲಿ ವಿವಿಧ ರೂಪದ ದಾಸೋಹಗಳು ಚಾಲ್ತಿಯಲ್ಲಿವೆ. ಅದರಲ್ಲಿ ಜ್ಞಾನ ದಾಸೋಹವೇ ಅತೀ ಶ್ರೇಷ್ಠವಾಗಿದೆ. ಜ್ಞಾನವು ವ್ಯಕ್ತಿಯನ್ನು ಪರಿರ್ಪೂಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ಜ್ಞಾನ ದಾಸೋಹ ಎಲ್ಲ ಕಾಲಕ್ಕೂ ಸಲ್ಲುವಂತದ್ದಾಗಿದೆ. ವಿದ್ಯಾಥಿರ್ಗಳನ್ನು ಪುಸ್ತಕದ ಜ್ಞಾನದ ಜೊತೆಗೆ ಜನರ ಸಂಪರ್ಕ ಹೊಂದುವುದು ಮನುಷ್ಯನನ್ನು ಬಹುದೊಡ್ಡ ಮಟ್ಟಕ್ಕೆ ತಗೆದುಕೊಂಡು ಹೋಗುತ್ತದೆ ಎಂದರು.
ಉಪನ್ಯಾಸಕ ಡಾ. ವಿಜಯ ಮುರದಂಡೆ ಮಾತನಾಡಿ, ವಿದ್ಯಾಥಿರ್ಗಳು ಯಶಸ್ಸು ಪಡೆಯಲು ಶಿಸ್ತು ಮತ್ತು ಸಮಯ ಪಾಲನೆ ಮಾಡಬೇಕು. ಸಾಧಕನು ಅಮೂಲ್ಯ ಸಮಯದ ಸದ್ಭಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ ಎಂದರು.
ಉಪನ್ಯಾಸಕಿ ಡಾ. ಜ್ಯೋತಿ ಸಿ.ವಿ ಮಾತನಾಡಿ, ವಿದ್ಯಾಥಿರ್ಗಳು ಜೀವನದಲ್ಲಿ ಬಂದ ಅವಕಾಶಗಳನ್ನು ಚಿಕ್ಕದು ದೊಡ್ಡದೆಂದು ನೋಡದೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು
ಉಪನ್ಯಾಸಕರಾದ ಎಸ್​.ಟಿ. ಮೂರಶಿಳ್ಳಿನ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಸಿ.ಬಿ. ರಣಗಟ್ಟಿಮಠ, ಮಲ್ಲಿಕಾರ್ಜುನ ಪೂಜಾರ, ಶರತಕುಮಾರ ದರಬಾರ, ಎಂ. ಎನ್​. ಜಾಲಮ್ಮನವರ ಸುನೀಲಕುಮಾರ ಮಾಡಲಗೇರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net