ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವಲ್ಲಿ ಎನ್‌ಎಸ್‌ಎಸ್ ಸಹಕಾರಿ

NSS is helpful in inculcating patriotism in children
ಲೋಕಾಪುರ ಸಮೀಪದ ಕಾಡರಕೊಪ್ಪ ಗ್ರಾಮದಲ್ಲಿ ಬಿವಿವಿಎಸ್ ಮಹಿಳಾ ಪ.ಪೂ. ಕಾಲೇಜ ವತಿಯಿಂದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಕಾಡರಕೊಪ್ಪದ ಸದಾಶಿವ ಮಠದ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಪ್ರಾಚಾರ್ಯ ಎಸ್. ಎಂ. ಹುದ್ದಾರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಲ್. ನಾಯ್ಕ ಇತರರಿದ್ದರು.
Published on

ಲೋಕಾಪುರ: ಕೃಷಿಯಲ್ಲಿ ಸುಧಾರಣಾ ರೀತಿ, ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಒಳ್ಳೆಯ ಉದ್ದೇಶ ಹೊಂದಿರುವ ಎನ್.ಎಸ್. ಶಿಬಿರದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದು ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಬೆಂಗಳೂರು ತೋಟಗಾರಿಕೆ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ಎಲ್. ಬಿ. ನಾಯ್ಕ ಹೇಳಿದರು.

ಸಮಿಪದ ಕಾಡರಕೊಪ್ಪದಲ್ಲಿ ಬಿ.ವಿ.ವಿ. ಸಂಘದ ಬಿವಿವಿಎಸ್ ಮಹಿಳಾ ಪಪೂ ಕಾಲೇಜಿನ 2024-25ನೇ ಎನ್‌ಎಸ್‌ಎಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸ್ವಚ್ಛತೆ, ಶಾಂತಿ, ಸೌಹಾರ್ದತೆ, ಸಹೋದರತ್ವ ಮತ್ತು ಭಾವೈಕ್ಯ ಮೂಡಿಸುವಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತಲಿದೆ ಎಂದರು.

ಕಾಡರಕೊಪ್ಪದ ಸದಾಶಿವ ಮಠದ ದಯಾನಂದ ಸರಸ್ವತಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಗತಿಪರ ರೈತರಾದ ಆರ್.ಆರ್. ನಾಯಕ ಮಾತನಾಡಿ, ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿಸುವ ಕಾರ್ಯ ಎನ್‌ಎಸ್‌ಎಸ್ ಮಾಡುತ್ತಿದೆ. ಆ ಮೂಲಕ ನಮ್ಮ ಗ್ರಾಮಗಳ ಅಭಿವೃದ್ಧಿಗಳಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಪ್ರಾಚಾರ್ಯ ಎಸ್. ಎಂ. ಹುದ್ದಾರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಲ್. ನಾಯ್ಕ, ಉಪನ್ಯಾಸಕ ವಿ.ವಿ. ಗೊಬ್ಬನ್ನವರ, ಎಚ್.ಪಿ. ಶೇಬನ್ನವರ, ಗ್ರಾಮಸ್ಥರು ಮತ್ತು ಎನ್‌ಎಸ್‌ಎಸ್ ಸ್ವಯಂ ಸೇವಕರು ಇದ್ದರು. ವಿದ್ಯಾರ್ಥಿನಿಯರಾದ ಭವಾನಿ ಹಡಪದ, ಕೀರ್ತಿ ಉದುಪುಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net