ಸಾಮೂಹಿಕ ಪ್ರಗತಿಗೆ ಎನ್​ಎಸ್​ಎಸ್​ ಸಹಕಾರಿ

NSS is helpful for collective progress
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಎನ್​ಎಸ್​ಎಸ್​ ವಾರ್ಷಿಕ ವಿಶೇಷ ಶಿಬಿರವನ್ನು ರಾಹುಲ್​ ಡೊಂಗ್ರೆ ಉದ್ಘಾಟಿಸಿದರು. ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಶಂಕರಗೌಡ ಸೋಮನಾಳ ಮತ್ತಿತರರಿದ್ದರು.
Published on

ವಿಜಯಪುರ: ಸಾಮಾಜಿಕ ಜಾಗೃತಿ, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ವೈಯಕ್ತಿಕ ಮತ್ತು ಸಾಮೂಹಿಕ ಪ್ರಗತಿಗೆ ಎನ್​ಎಸ್​ಎಸ್​ ಸಹಕಾರಿಯಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್​ ಡೊಂಗ್ರೆ ಹೇಳಿದರು.

ನಗರ ಹೊರವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎನ್​ಎಸ್​ಎಸ್​ ಸ್ನಾತಕ ಬ ಹಾಗೂ ಮುಕ್ತ ಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎನ್​ಎಸ್​ಎಸ್​ ವಿದ್ಯಾರ್ಥಿಗಳಲ್ಲಿ ಮುಖಂಡತ್ವದ ಗುಣಗಳು, ನೈತಿಕ, ಶಿಸ್ತು ಮತ್ತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಮಾತನಾಡಿ, ಎನ್​ಎಸ್​ಎಸ್​ ಶಿಬಿರಗಳು ವಿದ್ಯಾರ್ಥಿಗಳಿಗೆ ಸೇವೆ ಜೊತೆಗೆ ಅನುಭವ ಆಧಾರಿತ ಕಲಿಕೆಯನ್ನು ಒದಗಿಸುವ ವಿಶಿಷ್ಟ ವೇದಿಕೆಯಾಗಿವೆ. ಅಲ್ಲದೆ, ಎನ್​ಎಸ್​ಎಸ್​ ಶಿಬಿರಗಳಿಂದ ಶಿಕ್ಷಣವನ್ನು ವರ್ಗಕೋಣೆಯ ಸೀಮಿತ ೇತ್ರದಿಂದ ಹೊರತಾಗಿ ಸಮುದಾಯದ ನೈಜ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿವೆ ಎಂದು ತಿಳಿಸಿದರು.

ಕುಲಸಚಿವ ಶಂಕರಗೌಡ ಸೋಮನಾಳ ಮತ್ತು ಎನ್​ಎಸ್​ಎಸ್​ ಕೋಶದ ಸಂಯೋಜನಾಧಿಕಾರಿ ಅಶೋಕ ಸುರಪುರ ಮಾತನಾಡಿದರು.

ಕಲಾವತಿ ಕಾಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಅಶ್ವಿನಿ ಕೆ.ಎನ್​., ಸ್ವಾಗತಿಸಿದರು. ಸೌಜನ್ಯ ನಿರೂಪಿಸಿದರು. ಡಾ. ಅಮರನಾಥ ಪ್ರಜಾಪತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net