

ವಿಜಯಪುರ:ಯುವಕರಲ್ಲಿ ಸಮಾಜಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ರಾಷ್ಟ್ರೀಯ ಸೇವಾ ಯೋಜನೆ ತನ್ನ 56ನೇ ವರ್ಷದ ಪಯಣ ಪೂರೈಸಿದೆ ಎಂದು ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕೋಶಗಳು, ಸ್ನಾತಕ, ಮುಕ್ತ ಮತ್ತು ಶಿಕ್ಷಣ ಟಕಗಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ 1969 ಸೆಪ್ಟೆಂಬರ್ 24 ರಂದು ಆರಂಭವಾದ ಎನ್ಎಸ್ಎಸ್ ಯೋಜನೆಯು ಯುವಕರು ಶಿಕ್ಷಣದ ಜತೆಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗುವಂತೆ ಮಾಡುವ ಉದ್ದೇಶದಿಂದ ರೂಪುಗೊಂಡಿದೆ. ಸೇವಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಕಟ್ಟಿಕೊಡಲು ಈ ಯೋಜನೆ ನೆರವಾಗುತ್ತಿದೆ ಎಂದು ಅವರು ತಿಳಿಸಿದರು.
ವಿವಿಯ ಎನ್ಎಸ್ಎಸ್ ಕೋಶದ ಸಂಯೋಜಕ ಅಶೋಕಕುಮಾರ ಸುರಪುರ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಜತೆಗೆ ಸಾಧ್ಯವಾದಷ್ಟು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿದರೆ ಮಾತ್ರ ಅವರ ವ್ಯಕ್ತಿತ್ವ ಸಂಪೂರ್ಣ ವಿಕಸಿತವಾಗುತ್ತದೆ ಎಂದು ಸಲಹೆ ನೀಡಿದರು.
ಎನ್ಎಸ್ಎಸ್ ಟಕದ ಕಾರ್ಯಕ್ರಮಾಧಿಕಾರಿ ಅಮರನಾಥ ಪ್ರಜಾಪತಿ ಮತ್ತಿತರರಿದ್ದರು.
ಸ್ವಯಂಸೇವಕಿಯರಾದ ರಾಣಿ, ಸೀಮಾ ಮತ್ತು ಅಮೃತಾ ಎನ್ಎಸ್ಎಸ್ ಗೀತೆ ಹಾಡಿದರು. ಗುಲಾಬ್ ರಾಠೋಡ್ ಸ್ವಾಗತಿಸಿದರು. ಕಲಾವತಿ ಕಾಂಬಳೆ ನಿರೂಪಿಸಿದರು. ದೀಪಕ್ ಶಿಂಧೆ ವಂದಿಸಿದರು.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಶಂಕರಗೌಡ ಸೋಮನಾಳ ಮಾತನಾಡಿದರು. ವಿವಿಯ ಎನ್ಎಸ್ಎಸ್ ಕೋಶದ ಸಂಯೋಜಕ ಅಶೋಕಕುಮಾರ ಸುರಪುರ, ಎನ್ಎಸ್ಎಸ್ ಟಕದ ಕಾರ್ಯಕ್ರಮಾಧಿಕಾರಿ ಅಮರನಾಥ ಪ್ರಜಾಪತಿ ಇತರರಿದ್ದರು.