

ಹೊಳೆನರಸೀಪುರ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡರೆ ಶಿಸ್ತು, ನಾಯಕತ್ವದ ಗುಣ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಟೇಲ್ ಹೇಳಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿ ನಗರ್ತಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಗ್ರಾಮದಲ್ಲಿ ಸ್ವಚ್ಛತೆ, ಜನರೊಂದಿಗೆ ಒಡನಾಟ, ಸಹಕಾರ, ಹಳ್ಳಿಯ ಸೊಗಡನ್ನು ಉಳಿಸಿ ಬೆಳೆಸುವ ಮತ್ತು ದೇಶಭಕ್ತಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಗ್ರಾಮಗಳಲ್ಲಿ ಪಸರಿಸುವ ಮೂಲಕ ಅರಿವು ಮೂಡಿಸಲಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಶಿವಣ್ಣೇಗೌಡ, ಗೋವಿಂದೇಗೌಡ, ಅಶೋಕ್, ಕೇಶವ್ ಡಾ.ಹರೀಶ್, ಸಂಯೋಜನಾಧಿಕಾರಿ ಡಾ.ಉಮೇಶ್, ಸಹ ಶಿಬಿರಾರ್ಥಿ ಡಾ.ಸಿದ್ದರಾಮ, ಬರ್ನಾಡ್ ಇತರರು ಇದ್ದರು.