ಎನ್‌ಎಸ್‌ಎಸ್‌ನಿಂದ ಸೇವಾ ಮನೋಭಾವ ವೃದ್ಧಿ

IMG20251031212203.jpg
Published on

ಧಾರವಾಡ: ಎನ್‌ಎಸ್‌ಎಸ್ ಸ್ವಯಂ ಸೇವಕರಲ್ಲಿ ಸ್ವಯಂ ಶಿಸ್ತಿನ ಜತೆಗೆ ಪರಿಸರ, ಆರೋಗ್ಯ ಸೇವಾ ಮನೋಭಾವನೆ ಬೆಳೆಯುವುದು ಕಾಲೇಜು ಹಂತದ ಎನ್‌ಎಸ್‌ಎಸ್ ಘಟಕಗಳಿಂದ ಮಾತ್ರ ಸಾದ್ಯ ಎಂದು ಕವಿವಿ ಸಿಂಡಿಕೇಟ್ ಸದಸ್ಯ ಮಹೇಶ ಹುಲ್ಲೆನ್ನವರ ಹೇಳಿದರು.

ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ರಾಷ್ಟೀಯ ಸೇವಾ ಯೋಜನೆ ಕೋಶ ಹಾಗೂ ಕೆ.ಎಲ್.ಇ ಮೃತ್ಯುಂಜಯ ಪದವಿ ಮಹಾವಿದ್ಯಾಲಯದಿಂದ ಮೃತ್ಯುಂಜಯ ಪದವಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲೆಯ ಎನ್‌ಎಸ್‌ಎಸ್ ಅಽಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ 1 ದಿನದ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಅಭಿಯಾನ ಮತ್ತು ಅವರ ಕನಸನ್ನು ನನಸು ಮಾಡುವ ಕಾರ್ಯವನ್ನು ಎನ್‌ಎಸ್‌ಎಸ್ ಘಕಟಗಳು ಮಾಡುತ್ತಿವೆ. ಈ ಘಟಕಗಳ ಮೂಲಕ ಹಸಿರು ವಾತಾವರಣ ಸೃಷ್ಟಿಸಲು ಸಸಿ ನೆಡುವ ಕಾರ್ಯಕ್ರಮಗಳನ್ನು ಮಾಡಬೇಕು ಎಂದರು.

ಅಶೋಕ ಚಿಕ್ಕೋಡಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಶಂಕರಲಿಂಗ ಶಿವಳ್ಳಿ, ಸಿ.ಎಸ್.ಪಾಟೀಲ, ವೈ.ಪಿ.ಮದನೂರ ಇದ್ದರು. ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಽಕಾರಿ ಜಯಾನಂದ ಹಟ್ಟಿ, ರವೀಂದ್ರ ಬಿ., ಶಂಕರಗೌಡ, ಮಂಜುನಾಥ, ಗೌತಮ ರೆಡ್ಡಿ, ಎನ್.ಎಂ.ಹೊಣಕೇರಿ ಹಾಗೂ 165 ಕಾಲೇಜುಗಳು ಎನ್‌ಎಸ್‌ಎಸ್ ಕಾರ್ಯಕ್ರಮ ಅಽಕಾರಿಗಳು ಮತ್ತು ಸ್ವಯಂ ಸೇವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net