ಅಂತರ್ ಕಾಲೇಜು ಮಟ್ಟದ ಎನ್‌ಎಸ್‌ಎಸ್ ಫೆಸ್ಟ್

PTR_23 MAY_2
Published on

ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಪುತ್ತೂರು, ಸುಳ್ಯ ವಲಯ ಮಟ್ಟದ ಅಂತರ್ ಕಾಲೇಜ್ ಎನ್‌ಎಸ್‌ಎಸ್ ಫೆಸ್ಟ್ ಸಮನ್ವಯ -೨೦೨೫ರಲ್ಲಿ ೭ ಕಾಲೇಜಿನ ೧೩೦ ಸ್ಪರ್ದಾಳುಗಳು ಭಾಗವಹಿಸಿದ್ದರು.

ಉದ್ಯಮಿ ಮನಮೋಹನ ರೈ ಚೆಲ್ಯಡ್ಕ ಉದ್ಘಾಟಿಸಿದರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಕೆ. ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಚಾಲಕ ಡಾ.ಕಾಂತೇಶ್ ಎಸ್. ಉಪಸ್ಥಿತರಿದ್ದರು. ಯೋಜನಾಧಿಕಾರಿ ಡಾ.ಯೋಗೀಶ್ ಎಲ್.ಎನ್ ಸ್ವಾಗತಿಸಿದರು. ಡಾ.ಲಾಯ್ಡ್ ವಿಕ್ಕಿ ಡಿಸೋಜ ವಂದಿಸಿದರು. ಘಟಕ ನಾಯಕಿ ಮಮತಾ ಕೆ. ಕಾರ್ಯಕ್ರಮ ನಿರೂಪಿಸಿದರು.

*ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಕೆ. ಅಧ್ಯಕ್ಷೀಯ ಭಾಷಣ ಮಾಡಿದರು. ಯೋಜನಾಧಿಕಾರಿ ಡಾ.ಲಾಯ್ಡ್ ವಿಕ್ಕಿ ಡಿಸೋಜ ಸ್ಪರ್ಧೆಗಳ ಫಲಿತಾಂಶ ಓದಿದರು. ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಶೇಷಪ್ಪ ಕೆ.ಅಮಿನ್, ಸಮಾಜಸೇವಕ ಕರುಣಾಕರ ರೈ ಕೋರ್ಮಂಡ, ಆಂತರಿಕ ಗುಣಮಟ್ಟ ಭರವಸಾಕೋಶ ಸಂಚಾಲಕ ಡಾ.ಕಾಂತೇಶ್ ಎಸ್., ಉಪ್ಪಿನಂಗಡಿ ಕಾಲೇಜು ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಹರಿಪ್ರಸಾದ್ ಎಸ್. ಉಪಸ್ಥಿತರಿದ್ದರು. ಸ್ವಯಂಸೇವಕಿ ದೀಕ್ಷಿತಾ ಸ್ವಾಗತಿಸಿದರು. ಯೋಜನಾಧಿಕಾರಿ ಡಾ.ಯೋಗೀಶ್ ಎಲ್.ಎನ್ ವಂದಿಸಿದರು. ಘಟಕ ನಾಯಕಿ ಸುಚಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net