ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ

13adarshkdga6
Published on

ಮಡಿಕೇರಿ: ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ೨೦೨೩-೨೦೨೪ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.


ಈ ಸಂದರ್ಭ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಹರ್ಷ ಮಾತನಾಡಿ, ಎನ್‌ಎಸ್‌ಎಸ್ ನಿಂದ ಸ್ವಯಂ ಶಿಸ್ತು ಸಮಯ ಪ್ರಜ್ಞೆ. ಸಮಾಜ ಸೇವೆ. ರಾಷ್ಟ್ರೀಯ ಭಾವೈಕ್ಯತೆ ರೂಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.


ಶಿಬಿರದ ಉದ್ಘಾಟನೆಯನ್ನು ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಪೊನ್ನಪ್ಪ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಕಾರ್ಯಕ್ರಮಾಧಿಕಾರಿ ಎನ್.ಎನ್.ಮನೋಹರ್ ಸಂಸ್ಥೆಯ ಬೋಧಕ ಬೋಧಕೇತರ ವರ್ಗ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net