ಭಾವೈಕ್ಯ ಶಿಬಿರ ಜಾಗೃತಿ ಜಾಥಾ

IMG_20240512_204848_840-1.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರದ ನಾಲ್ಕನೇ ದಿನ ಭಾನುವಾರ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ಪರಿಸರ, ಮಹೀಳಾ ಸಬಲೀಕರಣ ಮತ್ತು ವನ್ಯಜಿವಿ ರಣೆ ಕುರಿತು ಜಾಗೃತಿ ಮೂಡಿಸಲಾಯಿತು. ಶಿಬಿರಾಥಿರ್ಗಳು ಘೋಷಣೆಗಳನ್ನು ಕೂಗುತ್ತ ನವನಗರ, ಸುತಗಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಜಾಥಾ ನಡೆಸಿದರು.

ಕುಲಪತಿ ಡಾ. ಸಿ. ಬಸವರಾಜು ಅವರು ಜಾಥಾಕ್ಕೆ ಚಾಲನೆ ನೀಡಿದರು. ವಿವಿ ಎನ್ಎಸ್ಎಸ್ ಸಂಯೋಜಕ ಐ.ಬಿ. ಬಿರಾದಾರ, ವಿವಿಧ ಮಹಾವಿದ್ಯಾಲಯದ ಎನ್ಎಸ್ಎಸ್ ಸಂಯೋಜಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ವಿ.ಆರ್. ಕೃಷ್ಣಾ ಅಯ್ಯರ್ ತಂಡದವರು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯ ಮತ್ತು ಹೊರ ರಾಜ್ಯದ ತಂಡಗಳ ಶಿಬಿರಾಥಿರ್ಗಳು ಕಲಾತ್ಮಕ ಪ್ರದರ್ಶನಗಳನ್ನು ನೀಡಿದರು.

ಬೆಳಗ್ಗೆ ಮಾಧವ ಮೆನನ್ ತಂಡದವರು ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಸುನೀಲ ಬಾಗಡೆ ಧ್ವಜಾರೋಹಣ ಮಾಡಿದರು.

ತರಬೇತಿದಾರ ಬಸಪ್ಪ ಬಿ. ಅವರು ಯೋಗದ ಮಹತ್ವ ತಿಳಿಸಿದರು. ಶಿಬಿರಾಥಿರ್ಗಳು ಶ್ರಮದಾನದ ಮೂಲಕ ಸ್ವಚ್ಛತೆ ಕೈಗೊಂಡರು. ವಿವಿಧ ಕಡೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ನೇತ್ರ ತಪಾಸಣೆ:
ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನೇತ್ರ ತಪಾಸಣೆ ಶಿಬಿರ ನಡೆಯಿತು. ಡಾ. ಷಣ್ಮುಖ ಪ್ರಿಯಾ ಹಾಗೂ ಡಾ. ರು ಅವರು ಶಸ್ತ್ರ ಚಿಕತ್ಸೆ ಮತ್ತು ಕಣ್ಣಿನ ಆರೋಗ್ಯ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net