

ಚಿಟಗುಪ್ಪ: ದೇಶಾಭಿಮಾನದ ಜತಗೆ ಸೇವಾ ಮನೋಭಾವನೆ, ಶಿಸ್ತು, ಸಮಯ ಪ್ರಜ್ಞೆ ಮೂಡಿಸುವಲ್ಲಿ ಎನ್ ಎಸ್ ಎಸ್ ಶಿಬಿರಗಳು ಅತ್ಯಂತ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕರೆ ನೀಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ವಾರಗಳ ಕಾಲ ನಡೆಯುವ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಶ್ರಮದಾನದೊಂದಿಗೆ ಜೀವನ ಕೌಶಲ್ಯಗಳನ್ನು ಅರಿತುಕೊಳ್ಳಬೇಕು, ಜೊತೆಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಈ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿವಿಧ ಕೋರ್ಸಗಳ ಮೂಲಕ ಉತ್ತಮ ಶಿಕಣ ನೀಡುತ್ತಿದೆ ಎಂದರು.
ನ್ಯಾಕ್ ದಿಂದ 2017ರಲ್ಲಿ ‘ಬಿ’ ಮತ್ತು 2023ರಲ್ಲಿ ‘ಬಿ ಫ್ಲಸ್’ ಮಾನ್ಯತೆ ಪಡೆದಿರುವದೆ ಇದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಡಾ. ವೀರಶೆಟ್ಟಿ ಮೈಲೂರಕರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿ ಮತ್ತು ಸಮಷ್ಠಿಯ ಭಾಂದವ್ಯದ ಅರಿವು ಮೂಡಿಸುತ್ತದೆ, ಈ ಬಾರಿಯ ಸಂದೇಶ “ನನಗಲ್ಲ ನಿಮಗೆ” ಆಗಿದೆ. ವಾರದ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ತಿಳಿವಳಿಕೆ, ‘ಜೀವನ ಕೌಶಲ್ಯ ಹಾಗೂ
ಸಹಬಾಳ್ವೆ ತತ್ವ’. ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ, ಏಡ್ಸ ತಡೆಗಟ್ಟುವಲ್ಲಿ ಯುವಕರ ಪಾತ್ರ’ ‘ರಾಷ್ಟ್ರೀಯ ಭಾವೈಕ್ಯತೆ ಮತ್ತು
ಭಾತೃತ್ವ’ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ತರಬೇತಿ, ಸಸಿ ನೆಡುವದು ಹಾಗೂ ‘ಪ್ರಾಣಿಜನ್ಯ ರೋಗಗಳ ಕುರಿತು ಅರಿವು ಮೂಡಿಸುವ ವಿವಿಧ ವಿಶೇಷ
ಉಪನ್ಯಾಸಗಳನ್ನು ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಸುರೇಂದರ್ ಸಿಂಗ್ ಮಾತನಾಡಿ, ಕಾಲೇಜಿನಲಿ ಈ ವರ್ಷದಿಂದ ಹೊಸದಾಗಿ ಬಿ.ಸಿ.ಎ. ಕೋರ್ಸ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದು ಕೊಳ್ಳಬೇಕೆಂದು ತಿಳಿಸಿದರು. ಸಿಪಿಐ ಮಹೇಶಗೌಡ ಪಾಟೀಲ, ಪುರಸಭೆ ಮಾಜಿ
ಸದಸ್ಯಮಲ್ಲಿಕಾರ್ಜುನ ಪಾಟೀಲ, ಪ್ರಾಧ್ಯಾಪಕರಾದ ದಶರಥ ನಯನೂರ, ಡಾ. ಕೆ.ಶಿವಕುಮಾರ, ಶ್ರವಣಕುಮಾರಿ ಬಿರಾದಾರ, ಡಾ.ಶಿವಕುಮಾರ ಬಿರಾದಾರ, ರವೀಂದ್ರಕುಮಾರ ಟಿಳೇಕರ್, ಸಯೀದಾ ಬಾನು, ಡಾ. ಜೈಭಾರತ ಮಂಗೇಷ್ಕರ, ಡಾ, ಜಯದೇವಿ ಗಾಯಕವಾಡ, ಡಾ. ಸತೀಶಕುಮಾರ ಡೊಂಗ್ರೆ, ಭಾಗ್ಯವತಿ, ಡಾ.ಶೇಷರಾವ, ಡಾ.ಯೇಸುಮಿತ್ರ, ಜಬಿವುಲ್ಲಾ, ಶಾಂತಕುಮಾರ ಪಾಟೀಲ್, ರಮೇಶಕುಮಾರ ಬಿರಾದಾರ, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಿನಿ ಸ್ವಾಗತಿಸಿದರು. ಐಶ್ವರ್ಯ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.