

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ತಾಲೂಕಿನ ಗಬ್ಬೂರನಲ್ಲಿ ನಡೆದಿರುವ ಎನ್ಎಸ್ಎಸ್ ಶಿಬಿರದಲ್ಲಿ ಸಾರ್ವಜನಿಕರ ದಂತ ತಪಾಸಣೆ ಹಾಗೂ ಚಿಕಿತ್ಸೆ ನಡೆಸಲಾಯಿತು.
ಎಸ್ ಡಿಎಂ ದಂತ ಮಹಾವಿದ್ಯಾಲಯದ ಡಾ. ಪ್ರೀತಾ ಶೆಟ್ಟಿ ಹಾಗೂ ತಂಡದವರು ದಂತ ಶಿಬಿರ ನಡೆಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ವಿಶಾಲಾಕ್ಷಿ ಕಾನಪೇಟ ಮಾತನಾಡಿದರು. ಪ್ರೊ. ಪೂರ್ಣಿಮಾ ಕುರಡಿಕೇರಿ ಅಧ್ಯಕ್ಷತೆ ವಹಿಸಿದ್ದರು.
ದಂತ ಮಹಾವಿದ್ಯಾಲಯದ ಡಾ. ಪ್ರಿಯಾಂಕ, ಡಾ. ಶ್ರೇಯಾ ಹಾಗೂ ಪ್ರೊ. ಬಾಬುಲಾಲ್ ದರಗದ, ಡಾ. ದೀಪಾ ಪಾಟೀಲ, ಮಂಜುನಾಥ ಹಿರೇಮಠ, ಎನ್.ಎಸ್.ಎಸ್. ಅಧಿಕಾರಿ ಸುರೇಶ ಲಿಂಬಿಕಾಯಿ, ಸತೀಶ್ ಸಿ.ವಿ. ಮುಂತಾದವರು ಉಪಸ್ಥಿತರಿದ್ದರು.
ಪ್ರೀತಿ ಪ್ರಾರ್ಥಿಸಿದರು. ಅಶ್ವಿನಿ ನಿರೂಪಿಸಿದರು. ರಕ್ಷಿತಾ ವಂದಿಸಿದರು.