ಎನ್ನೆಸ್ಸೆಸ್ ಸಪ್ತಾಹ ಸಮಾರೋಪ

New Project (53)
Published on

ಗುರುಪುರ: ಕುಪ್ಪೆಪದವು ಕಿಲೆಂಜಾರಿನ ಅರಮನೆ ಸರ್ಕಾರಿ ಪ್ರೌಢಶಾಲೆಯಲ್ಲಿ ಯೆನೆಪೋಯ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಆಡಳಿತ ವಿದ್ಯಾಲಯದ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸೇವಾ ಶಿಬಿರದ ಸಮಾರೋಪ ಶನಿವಾರ ನಡೆಯಿತು.

ಮುಖ್ಯ ಶಿಕ್ಷಕ ಬಾಬು ಪಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಸಮಾ ರೋಪದಲ್ಲಿ ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ವಿದ್ಯಾವರ್ಧಕ ಸಂಘ ಗೌರವ ಸದಸ್ಯ ಭೋಜರಾಜ ಜೈನ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶೇಖ್ ಅಬ್ದುಲ್ಲ, ವಿದ್ಯಾವರ್ಧಕ ಸಂಘ ಅಧ್ಯಕ್ಷ ಅಜಿತ್ ಕುವಾರ್ ಜೈನ್, ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಝೀರ್ ಕುಪ್ಪೆಪದವು, ನ್ಯೂ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮುಸ್ತಫ, ವಿದ್ಯಾವರ್ಧಕ ಸಂದ ಸದಸ್ಯರಾದ ತಿಮ್ಮಪ್ಪ ಶೆಟ್ಟಿ, ಶಶಿಧರ ಶೆಟ್ಟಿ, ಸಹ ಶಿಕ್ಷಕ ವಾರ್ಕ್ ಜೆ.ಮೆಂಡೋನ್ಸ, ಉದಯ ಕುವಾರ್, ಖಲಂದರ್, ಹಸನಬ್ಬ, ರುಚಿತ್ ಎಡಪದವು, ಪಯಾಝ್ ಅಲ್ ಮುಜೈನ್, ಹರಿಶ್ಚಂದ್ರ ಗೌಡ, ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಪ್ಪೆಪದವು ಶುಭ ಹಾರೈಸಿದರು.

ಶಿಬಿರಾರ್ಥಿ ಸಿಂಚನಾ ಸ್ವಾಗತಿಸಿದರು. ನಿಖಿತಾ ನಿರೂಪಿಸಿದರು. ಪ್ರಿಯಾ ಮತ್ತು ಪ್ರವಿತಾ ಶೆಟ್ಟಿ ಶಿಬಿರದ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net