ಅನುಭವಗಳೇ ಜೀವನಕ್ಕೆ ಪಾಠ : ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿಕೆ

Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ದೀರ್ಘವಾದ ಬದುಕಿನಲ್ಲಿ ಬರುವ ಸಂಘರ್ಷಗಳು ಬದುಕಿನ ಸಂಕೀರ್ಣತೆ, ಸವಾಲುಗಳನ್ನು ಎದುರಿಸುವಲ್ಲಿ ಎನ್‌ಎಸ್‌ಎಸ್ ಶಿಬಿರ ಆತ್ಮವಿಶ್ವಾಸ ತುಂಬುತ್ತದೆ. ವಿಧೇಯತೆ, ಸಮಾನತೆ, ಸ್ನೇಹ, ಬಾಂಧವ್ಯ ಶಿಬಿರದ ಮೂಲಕ ಸಾಕ್ಷಾರತೆಗೊಳ್ಳುತ್ತದೆ. ಅನುಭವ ಜೀವನಕ್ಕೆ ಪಾಠವಾಗಿ ಪ್ರತಿಯೋರ್ವ ಸ್ವಯಂಸೇವಕನ ಬದುಕಿಗೆ ದೀಪವಾಗುತ್ತದೆ ಎಂದು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.

ಮಾರ್ಪಾಡಿ ಗ್ರಾಮದ ನಡ್ಯೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಕ್ಸಲೆಂಟ್ ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಕ್ಸಲೆಂಟ್ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಧನಾತ್ಮಕ ಚಿಂತನೆಗಳು ನಿಮ್ಮ ಆಲೋಚನೆಗಳನ್ನು ಬಲಗೊಳಿಸಿ ಸದೃಢ ರಾಷ್ಟ್ರ ಕಟ್ಟುವಂತಾಗಲಿ. ಪರಿಸರ ಪ್ರೀತಿ ನಿಮಗೆ ಜೀವನ ಪದ್ಧತಿಯಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ವಕೀಲ ಬಾಹುಬಲಿ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ ಸತೀಶ್, ಶಿಕ್ಷಕಿ ಜಾನೆಟ್ ಲೋಬೊ, ಸಲಹಾ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ಸ್ಥಳೀಯರಾದ ಪುರುಷೋತ್ತಮ ಶೆಟ್ಟಿ, ಪ್ರದೀಪ್ ಪೈ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಭರತೇಶ್, ಎಕ್ಸಲೆಂಟ್ ಕಾಲೇಜು ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಿಬಿರಾಧಿಕಾರಿ ತೇಜಸ್ವಿ ಭಟ್, ವಿದ್ಯಾರ್ಥಿ ನಾಯಕ ಅಭಿನವ, ನಾಯಕಿ ಅಪೇಕ್ಷಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸೃಷ್ಟಿದುರ್ಗಾ, ಸಮೀಕ್ಷಾ ಶೆಟ್ಟಿ, ಚಂದ್ರಶೇಖರ್ ಸಾನ್ವಿ, ಪ್ರಥಮ್, ಊರವರ ಪರವಾಗಿ ಪತ್ರಕರ್ತರಾದ ಪ್ರಸನ್ನ ಹೆಗ್ಡೆ ಅಭಿಪ್ರಾಯ ಮಂಡಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿನೊಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net