ಪರಿಪೂರ್ಣ ಬೆಳವಣಿಗೆಗೆ ಎನ್ನೆಸ್ಸೆಸ್ ಸಹಕಾರಿ

08BTP01
Published on

ಬೆಟ್ಟದಪುರ: ವಿದ್ಯಾರ್ಥಿಗಳು ಪರಿಪೂರ್ಣವಾಗಿ ಬೆಳವಣಿಗೆ ಹೊಂದಲು ರಾಷ್ಟ್ರೀಯ ಸೇವಾ ಯೋಜನೆ ಅವಶ್ಯವಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ದೊಡ್ಡನೇರಳೆ ಗ್ರಾಮದಲ್ಲಿ ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿತ್ತೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜವರೇಗೌಡ ಅವರು ಹಣಕಾಸು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಶಿಬಿರಾಧಿಕಾರಿ ಎಂ.ಜಲೇಂದ್ರ, ಸಹ ಶಿಬಿರಾಧಿಕಾರಿ ಪ್ರಮೋದ್, ಅಧ್ಯಾಪಕರಾದ ಸತೀಶ್, ಡಿ.ವಿ, ಪದ್ಮಾವತಿ, ಕಾವ್ಯಾ, ಶಿಬಿರ ಸಹಾಯಕ ಡಿ.ಎಂ ಕೀರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net