ವಿದ್ಯೋದಯ ಕಾನೂನು ಕಾಲೇಜಿನ ಎನ್​ಎಸ್​ಎಸ್​ ಘಟಕಕ್ಕೆ ರಾಜ್ಯ ಪ್ರಶಸ್ತಿ

Vidyodaya_NSS
Published on

ತುಮಕೂರು: ರಾಜ್ಯ ಸರ್ಕಾರದಿಂದ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಘಟಕ ಪ್ರಶಸ್ತಿಗೆ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜು ಭಾಜನವಾಗಿದೆ.

ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ರಾಜ್ಯ ಎನ್​ಎಸ್​ಎಸ್​ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022- 23ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್​ ಎಸ್​ಎಸ್​) ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿದ್ಯೋದಯ ಕಾಲೇಜು ತಂಡ ಅತ್ಯುತ್ತಮ ಎನ್​ಎಸ್​ಎಸ್​ ಘಟಕ ಹಾಗೂ ಎನ್​ಎಸ್​ ಎಸ್​ ಕಾರ್ಯಕ್ರಮ ಅಧಿಕಾರಿ ಡಾ.ವಿ.ಕಿಶೋರ್​ ಗೆ "ರಾಜ್ಯಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ' ಪ್ರಶಸ್ತಿಯನ್ನು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋತ್​ ಪ್ರದಾನ ಮಾಡಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಯುವ ಸಬಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್​, ಇಲಾಖೆಯ ಆಯುಕ್ತ ಆರ್​.ಚೇತನ್​, ರಾಜ್ಯ ಎನ್​ಎಸ್​ಸ್​ ಅಧಿಕಾರಿ ಪ್ರತಾಪ್​ ಲಿಂಗಯ್ಯ, ಎನ್​ಎಸ್​ಎಸ್​ ಪ್ರಾದೇಶಿಕ ನಿರ್ದೇಶಕ ಡಿ.ಕಾರ್ತಿಗೇಯನ್​ ಉಪಸ್ಥಿತರಿದ್ದರು.

ವಿದ್ಯೋದಯ ಕಾನೂನು ಕಾಲೇಜಿನ ಮ್ಯಾನೇಜಿಂಗ್​ ಟ್ರಸ್ಟಿ ಎಚ್​.ಎಸ್​.ರಾಜು, ಕಾಲೇಜಿನ ಸಿಇಒ ಚಂದ್ರಣ್ಣ, ಪ್ರಾಂಶುಪಾಲೆ ಶಾಮಾ ಸೈದಿ, ಎನ್​ಎಸ್​ಎಸ್​ ಅಧಿಕಾರಿಗಳಾದ ಪುಷ್ಪ, ಮಧುಸೂದನ್​ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net