ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

IMG-20241224-WA0436
ಮಲ್ಲಿ ದೇವಿಹಳ್ಳಿ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿದರು. ಮಂಜುನಾಥ, ಶಿವಣ್ಣ ಚಂದ್ರಶೇಖರ್, ರಘು, ಸಿದ್ದೇಶ್, ದಿನೇಶ್ ಇತರರಿದ್ದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಮಲ್ಲಿ ದೇವಿಹಳ್ಳಿ ಗ್ರಾಮದಲ್ಲಿ ಅರಸೀಕೆರೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿತ್ತು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರಲ್ಲದೆ, ಎನ್‌ಎಸ್‌ಎಸ್ ಕಾರ್ಯಚಟುವಟಿಕೆ, ಉದ್ದೇಶ, ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಂದಾಯ ಇಲಾಖೆ ಸೇವೆಗಳ ಕುರತು ಮಾಹಿತಿ ನೀಡಿದರು.

ಗ್ರಾಮದ ಮುಖಂಡ ಮಂಜುನಾಥ್ ಮಾತನಾಡಿದರು.ಶಿಬಿರದ ಮೇಲ್ವಿಚಾರಕ ಗೋವಿಂದರಾಜು, ಮುಖಂಡರಾದ ಚಂದ್ರಶೇಖರ್, ದೊಡ್ಡೇನಹಳ್ಳಿ ರಘು, ಬಿ,ಡಿ, ಮೋಹನ್ ಕುಮಾರ, ಸಿದ್ದೇಶ್, ಪೂಜಾರ್ ನಾಗಣ್ಣ, ಶಿವಣ್ಣ, ದೇವರಾಜ್, ದಿನೇಶ್(ಪಟೇಲ್) ಲಯನ್ ಗೋವಿಂದರಾಜು, ಡಿ.ಬಿ.ಮೋಹನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net