ಶುದ್ಧೀಕರಣ ಘಟಕದ ಕಾಮಗಾರಿ ಪರಿಶೀಲನೆ

12M.D.R.1
ಮದ್ದೂರು ನಗರಸಭೆ ವ್ಯಾಪ್ತಿಯ ಯುಜಿಡಿ ಯೋಜನೆಯಡಿ ನಿರ್ಮಿತ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಶಾಸಕ ಎಂ.ಉದಯ್ ಪರಿಶೀಲಿಸಿದರು. ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ಬಸವರಾಜು, ಕಮಲ್‌ನಾಥ್ ಇದ್ದರು.
Published on

ಮದ್ದೂರು: ನಗರಸಭೆ ವ್ಯಾಪ್ತಿಯ ಯುಜಿಡಿ ಯೋಜನೆಯಡಿ ನಿರ್ಮಿತ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಶಾಸಕ ಎಂ.ಉದಯ್ ಶನಿವಾರ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಘಟಕದ ಕಾರ್ಯ ವಿಧಾನ, ಶುದ್ಧೀಕರಣ ಪ್ರಕ್ರಿಯೆ ಹಾಗೂ ತಾಂತ್ರಿಕ ನಿರ್ವಹಣೆ ಕುರಿತು ಅಧಿಕಾರಿಗಳಿಂದ ವಿವರಗಳನ್ನು ಪಡೆದು ಪರಿಶೀಲನೆ ನಡೆಸಿ ಕಾಮಗಾರಿಯಲ್ಲಿ ಯಾವುದೇ ಲೋಪ ದೋಷ ಇಲ್ಲದ ಹಾಗೆ ಮುಂಜಾಗ್ರತೆ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶುದ್ಧೀಕರಿಸಲಾದ ನೀರನ್ನು ರೈತರ ಕೃಷಿ ಉಪಯೋಗಕ್ಕೆ ನೀಡುವ ಕುರಿತು ಸ್ಥಳದಲ್ಲೇ ಚರ್ಚಿಸಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು.

ನಗರದ ನೈರ್ಮಲ್ಯ ಹಾಗೂ ಆರೋಗ್ಯಕರ ಪರಿಸರ ಕಾಪಾಡುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸುತ್ತಿದ್ದು, ಮದ್ದೂರು ನಗರದ ಶುದ್ಧ ಮತ್ತು ಹಸಿರು ಭವಿಷ್ಯದತ್ತ ಒಂದು ಹೆಜ್ಜೆ ಆಗಿದೆ ಎಂದು ವಿವರಿಸಿದರು.

ನಗರಸಭೆ ಅಧ್ಯಕ್ಷ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯರಾದ ಬಸವರಾಜು, ಕಮಲ್‌ನಾಥ್, ಸಿದ್ದರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಅಧಿಕಾರಿಗಳಾದ ನಪಾಢ್, ನಾಗರಾಜು, ಮುಖಂಡ ಶಿವರಾಜ್, ನಿತಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net