ರಾಷ್ಟ್ರೀಯ ಭದ್ರತಾ ದಳ ಮಹಾನಿರ್ದೇಶಕರಾಗಿ ಕೊಡಗಿನ ಮನೆಯಪಂಡ ಎ. ಗಣಪತಿ ನೇಮಕ

IMG-20210317-WA0073
Published on

ಮಡಿಕೇರಿ: ರಾಷ್ಟ್ರೀಯ ಭದ್ರತಾ ದಳ (ಎನ್ ಎಸ್ ಜಿ) ಮಹಾನಿರ್ದೇಶಕರಾಗಿ ಕೊಡಗು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಮನೆಯಪಂಡ ಎ. ಗಣಪತಿ ನೇಮಕಗೊಂಡಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಅಧೀನದಲ್ಲಿ ಬರುವ ಎನ್ ಎಸ್ ಜಿ ಹುದ್ದೆಗೆ ಗಣಪತಿ ಅವರನ್ನು ನೇಮಿಸಿ ಕೇಂದ್ರ ಸಿಬ್ಬಂದಿ ಸಚಿವಾಲಯ  ಆದೇಶ ಹೊರಡಿಸಿದೆ. 2024ನೇ ಇಸವಿ ಫೆಬ್ರವರಿ 29 ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಭಯೋತ್ಪಾದಕ ನಿಗ್ರಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಎನ್ ಎಸ್ ಜಿಯ ಮಹಾನಿರ್ದೇಶಕ ಹುದ್ದೆಯು ಸೇನೆಯ ಲೆಫ್ಟಿನೆಂಟ್ ಜನರಲ್, ವಾಯುಪಡೆಯ ಏರ್ ಮಾರ್ಷಲ್, ನೌಕ ಪಡೆಯ ವೈಸ್ ಅಡ್ಮಿರಲ್ ಹುದ್ದೆಗೆ ಸಮ. ಕೇಂದ್ರ ಗೃಹ ಸಚಿವಾಲಯದ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಗಣಪತಿ ಅವರು ಸಚಿವಾಲಯ ವಕ್ತಾರರಾಗಿದ್ದರು.

ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೊಸದಿಲ್ಲಿ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ. 1986ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಉತ್ತರಖಾಂಡ್ ರಾಜ್ಯ ಕೇಡರ್ ಅಧಿಕಾರಿಯಾಗಿದ್ಧಾರೆ.

ಉತ್ತರಖಾಂಡ್ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ನಾಗರಿಕ ವಿಮಾನಯಾನ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. 29 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮುರ್ದಾಬಾದ್, ಸೋನೆಭದ್ರಾ, ಹರೊಡಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ನೈನಿತಾಲ್, ಮೀರಾತ್್, ಕಾನ್ಪೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.

1999 ರಲ್ಲಿ ಸಿಬಿಐಗೆ ಎಸ್ಪಿಯಾಗಿ ನಿಯೋಜನೆಗೊಂಡರು. ಹೊಸದಿಲ್ಲಿಯ ಸ್ಪೆಷಲ್ ಕ್ರೈಂ ಬ್ರ್ಯಾಂಚ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹೊಸದಿಲ್ಲಿಯ ಭ್ರಷ್ಟಾಷಾರ ನಿಗ್ರಹ ದಳ ಮಹಾನಿರ್ದೇಶಕರಾಗಿದ್ದರು. ಹರಿದ್ವಾರ ವಿಭಾಗದ ಐಜಿಪಿ,ಉತ್ತರಖಾಂಡ್ ರಾಜ್ಯದ ಎಡಿಜಿಪಿ ಹುದ್ದೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net