ಎಸ್ಸೆಮ್ಸೆಸ್ ಕಾಲೇಜಿನಲ್ಲಿ ಎನ್ನೆಸ್ಸೆಸ್ ಶಿಬಿರ

mundadi
ಎಸ್.ಎಂ.ಎಸ್ ಪದವಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರವನ್ನು ಕೃಷಿಕ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ ಉದ್ಘಾಟಿಸಿದರು.
Published on

ಬ್ರಹ್ಮಾವರ: ಎಸ್‌ಎಂಎಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಮುಂಡಾಡಿಯ ವಿಶ್ವಜ್ಞಾನ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಕೃಷಿಕ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ ಉದ್ಘಾಟಿಸಿದರು.

ಸಂಚಾಲಕ ಎಂ.ಸಿ.ಮಥಾಯ್ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಖಾರಾಮ್ ಸೋಮಯಾಜಿ ಶುಭಹಾರೈಸಿದರು. ಪ್ರಾಂಶುಪಾಲ ರಾಬರ್ಟ್ ರೋಡ್ರಿಗಸ್, ಎಸ್‌ಡಿಎಂಸಿ ಅಧ್ಯಕ್ಷ ವಾಸುದೇವ ಶೆಟ್ಟಿ, ಮಂದಾರ್ತಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ, ಚಿನ್ಮಯ ಯುವಕ ಮಂಡಲ ಅಧ್ಯಕ್ಷ ಪ್ರಕಾಶ್ ಆಚಾರ್ಯ, ವಿಶ್ವಜ್ಞಾನ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ಪ್ರಸ್ತಾವನೆಗೈದರು. ಯಜ್ನೇಶ್ ಸ್ವಾಗತಿಸಿದು. ವಿದ್ಯಾ ವಂದಿಸಿದರು. ಶಶಾಂಕ್, ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net