ಜೂ.21 ರಂದು ಎನ್‌ಎಸ್‌ಬಿ ಅವರ ಚೈತನ್ಯ ಸಾಗರ ಗ್ರಂಥ ಲೋಕಾರ್ಪಣೆ

raichur
raichur
Published on

ರಾಯಚೂರು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ 79ನೇ ಜನ್ಮದಿನೋತ್ಸವ ನಿಮಿತ್ತ ಅಭಿನಂದನೆ ಹಾಗೂ ಚೈತನ್ಯ ಸಾಗರ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಜೂ.21 ರಂದು ಬೆಳಗ್ಗೆ 10;30ಕ್ಕೆ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆಂದು ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ ಹೇಳಿದರು.

ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್.ಎಸ್.ಬೋಸರಾಜು ಸುಮಾರು 40 ವರ್ಷಗಳ ಕಾಲ ರಾಜಕೀಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಇವರ ಸಾಧನೆ ಹಿನ್ನಲೆಯಲ್ಲಿ ಹಿರಿಯ ಸಾಹಿತಿಗಳಾದ ಮಹಾಂತೇಶ ಮಸ್ಕಿ, ವೀರ ಹನುಮಾನ ಹಾಗೂ ವಿವಿಧ ಸಾಹಿತಿಗಳು ಸೇರಿ ಅಭಿನಂದನೆ ಹಾಗೂ ಚೈತನ್ಯ ಸಾಗರ ಗ್ರಂಥವನ್ನು ರಚನೆ ಮಾಡಿದ್ದಾರೆ. ಗ್ರಂಥ ಪರಿಚಯವನ್ನು ಹಿರಿಯ ಸಾಹಿತಿ ಎಲ್.ಹನುಮಂತಯ್ಯ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಭಾಪತಿ ಯು.ಟಿ.ಖಾದರ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕಾನೂನು ಸಚಿವ ಹೆಚ್. ಕೆ.ಪಾಟೀಲ್, ಗ್ರಂಥ ಲೋಕಾರ್ಪಣೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ, ಅತಿಥಿಗಳಾಗಿ ತೆಲಂಗಾಣ ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ,ಪಶುಸಂಗೋಪನೆ ಸಚಿವ ವಾಕಿಟಿ ಶ್ರೀಹರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಸೇರಿ ಜಿಲ್ಲೆಯ ಅನೇಕ ಶಾಸಕರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಜಯಣ್ಣ, ಅಮರೇಗೌಡ ಅಂಚಿನಾಳ, ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ್ ಅತ್ತನೂರು,ಪಿ.ಬೂದೆಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net