

ಸೆಸ್ಟೊಬಾಲ್ ಕ್ರೀಡೆಯಲ್ಲಿ ಮೈಸೂರಿನ ಪ್ರತಿಭೆ ಎನ್.ಎಸ್.ಪುಣ್ಯಶ್ರೀ ಗಮನಾರ್ಹ ಸಾಧನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸೆಸ್ಟೊಬಾಲ್ ವರ್ಲ್ಡ್ ಕಪ್-2023 ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ತಂಡದ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಜತೆಗೆ ಭಾರತದ ಮಹಿಳಾ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯುವಲ್ಲಿ ಎನ್.ಎಸ್.ಪುಣ್ಯಶ್ರೀ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೈಸೂರಿನ ವಸಂತನಗರದ ಶಿವಸ್ವಾಮಿ, ಎನ್.ಬಿ.ಲಕ್ಷ್ಮೀ ದಂಪತಿಯ ಪುತ್ರಿಯಾಗಿರುವ ಪುಣ್ಯಶ್ರೀ ಧಾರವಾಡ ವಿವಿಯ ಆರ್‌ಜಿಇಎಸ್ ಬಿಪಿಎಡ್ ವಿದ್ಯಾರ್ಥಿಯಾಗಿದ್ದಾರೆ.