

ಹುಬ್ಬಳ್ಳಿ: ಇಲ್ಲಿಯ ಆಕ್ಸಫರ್ಡ್ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಹುಬ್ಬಳ್ಳಿ ಧಾರವಾಡ ಅಂತರ್ ಕಾಲೇಜು ನೃತ್ಯ ಸ್ಪರ್ಧೆ ನೃತ್ಯಂ 2024 ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಆಕ್ಸಫರ್ಡ್ ಗ್ರುಪ್ ಆಫ್ ಇನ್ ಸ್ಟಿಟ್ಯೂಷನ್ಸ್ ಚೇರ್ಮನ್ ವಸಂತ ಹೊರಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣ ಮಾಡಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು.
ಅವಳಿನಗರದ ವಿವಿಧೆಡೆಯ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕಲೆ ಪ್ರದರ್ಶಿಸಿ ಬಹುಮಾನ ಪಡೆದರು. ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಏಕ ವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ಜೆಎಸ್ಎಸ್ ಪ್ರವೀಣ ಪ್ರಥಮ, ಜೈನ್ ಕಾಲೇಜ್‌ನ ಸಂದೀಪ ಹಾಗೂ ಐಬಿಎಂ ಆರ್ ಪವಿತ್ರಾ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.
ಸಮೂಹ ನೃತ್ಯದಲ್ಲಿ ಜೆ.ಜಿ. ಕಾಲೇಜು ಪ್ರಥಮ, ಜೆಎಸ್ಎಸ್ ಹಾಗೂ ಸಮರ್ಥ ಕಾಲೇಜು ರನ್ನರ್ ಅಪ್ ಪಡೆದುಕೊಂಡಿವೆ. ವೋವ್ ಪರ್ಫಾಮನ್ಸನಲ್ಲಿ ಜೆ.ಜಿ. ಕಾಲೇಜಿನ ಪ್ರಜ್ಞಾ ಜಯ ಗಳಿಸಿದರು.
ಮೇಘನಾ ಆರ್.ಸಿ., ರೋಹಿತ್ ಎಚ್., ವಿ.ಕೆ. ಜಗ್ಗಿ ಅವರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಶಿವಾನಿ ಪ್ರಾರ್ಥನೆ ಹಾಡಿದರು. ಸ್ನೇಹಿತಾ, ಗುಂಜನ್ ಜೋತ್ವಾನಿ, ತ್ರಿನೇತ್ರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಮಂಜುನಾಥ ಮುತ್ತಲಗೇರಿ ಸ್ವಾಗತಿಸಿದರು. ಮನ್ ಪ್ರೀತ ಕೌರ್ ವಂದಿಸಿದರು.