ಡೆತ್‌ನೋಟ್‌ನಲ್ಲಿ ಆಘಾತಕಾರಿ ವಿಷಯ ಬಹಿರಂಗ

26 dwd
Published on

ಧಾರವಾಡ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದ ಧಾರವಾಡದ ಮಹಿಳೆ ಪ್ರಿಯದರ್ಶಿನಿ ಪಾಟೀಲಗೆ ಜೀವ ಬೆದರಿಕೆ ಇತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮೊದಲು ಅವರು ಬರೆದ ಡೆತ್‌ನೋಟ್‌ನಲ್ಲಿ ಬೆದರಿಕೆಯ ವಿಷಯ ಪ್ರಸ್ತಾಪಿಸಿದ್ದು, ತನ್ನ ಸಾವಿಗೆ ಅಲ್ಲಿನ ಹಲವು ಕುಟುಂಬದವರು ಕಾರಣ ಎಂದು ವಿವರಿಸಿದ್ದಾರೆ.

ಅವರ ಡೆತ್‌ನೋಟ್ ವಿಜಯವಾಣಿ'ಗೆ ಲಭ್ಯವಾಗಿದ್ದು, ಅದರ ವಿವರ ಹೀಗಿದೆ. ನಾವಿಲ್ಲಿ ಜೀವ ಬೆದರಿಕೆಯ ಸ್ಥಿತಿಯಲ್ಲಿದ್ದೇವೆ. ಮಕ್ಕಳ ಮತ್ತು ಲಿಂಗರಾಜ (ಪತಿ) ಉಳಿವಿಗಾಗಿ ನಾನು ಸಾಯಬೇಕು. ನನ್ನ ಬಗ್ಗೆ ಚಿಂತಿಸಬೇಡಿ. ಕುಟುಂಬ ಮತ್ತು ಮಕ್ಕಳಿಗಾಗಿ ಉತ್ತಮ ಸಾವು ಎಂದು ಸ್ವೀಕರಿಸಿದ್ದೇನೆ. ೨೦೨೧ರಿಂದ ಇಲ್ಲಿಯವರೆಗೆ ಡಿಸಿಜೆ ನಮ್ಮ ಕುಟುಂಬವನ್ನು ಹಾಳು ಮÁಡಿದ್ದಾರೆ. ಪೊಲೀಸ್ ಅಽಕಾರಿಗಳು ತೊಂದರೆ ಕೊಟ್ಟಿದ್ದಾರೆ. ಸಿಡ್ನಿಯ ವರ್ಲಿ ಸ್ಟಿçÃಟ್‌ನ ನಂ. 17, 18ಎ, ಬಿ, 19, 20, 22ರ ಕುಟುಂಬಗಳು ತೊಂದರೆ ಕೊಟ್ಟಿದ್ದಾರೆ. ಅವರೆಲ್ಲ ನನ್ನ ಕುಟುಂಬದ ಈ ಸ್ಥಿತಿ ಮತ್ತು ನನ್ನ ಸಾವಿಗೆ ಕಾರಣ. ನನ್ನ ಮನೆಗೆ ಪೂರೈಕೆಯÁಗುತ್ತಿದ್ದ ನೀರಿನಲ್ಲಿ ವಿಷ ಬೆರೆಸಲಾಗಿತ್ತು. ಇದರಿಂದಾಗಿ ನಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಯಿತು' ಎಂದು ಮೃತ ಪ್ರಿಯದರ್ಶಿನಿ, ತಂದೆ ಎಸ್.ಎಸ್. ದೇಸಾಯಿ ಅವರಿಗೆ ಕಳುಹಿಸಿದ ಕೊರಿಯರ್‌ನಲ್ಲಿದ್ದ ಡೆತ್‌ನೋಟ್‌ನಲ್ಲಿ ವಿವರಿಸಿದ್ದಾರೆ.


ಧಾರವಾಡ ಸಪ್ತಾಪುರದ ಎಸ್.ಎಸ್. ದೇಸಾಯಿ ಅವರ ಪುತ್ರಿ ಪ್ರಿಯದರ್ಶಿನಿ ಪಾಟೀಲ ಪತಿ ಲಿಂಗರಾಜ ಹಾಗೂ ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದರು. ಪುತ್ರ ಅಮರ್ತ್ಯನ ಆರೋಗ್ಯದಲ್ಲಿ ಕೊಂಚ ತೊಂದರೆ ಕಾಣಿಸಿಕೊಂಡಿದ್ದರಿAದ ಪ್ರಿಯದರ್ಶಿನಿ ನೊಂದಿದ್ದರು. ಅಲ್ಲಿನ ಕಾನೂನಿಗೆ ಅನುಗುಣವಾಗಿ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪದಿಂದ ಸರ್ಕಾರ ಇಬ್ಬರು ಮಕ್ಕಳನ್ನು ಸುಪರ್ದಿಗೆ ಪಡೆದಿತ್ತು. ಆಸ್ಟ್ರೇಲಿಯಾದ ಕಠಿಣ ಕಾನೂನಿಗೆ ಬೇಸತ್ತ ಪ್ರಿಯದರ್ಶಿನಿ ಆ. ೧೮ರಂದು ಹೊರಟು ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ತವರು ಮನೆಗೆ ಹೋಗದೆ, ಸವದತ್ತಿಗೆ ಹೋಗಿ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ. ೨೦ರಂದು ಶವ ಪತ್ತೆಯಾಗಿತ್ತು. ಇದಕ್ಕೂ ಮುನ್ನ ಪ್ರಿಯದರ್ಶಿನಿ ತನ್ನಲ್ಲಿದ್ದ ಚಿನ್ನಾಭರಣ, ಹಣವನ್ನು ಬ್ಯಾಗ್‌ನಲ್ಲಿಟ್ಟು ತವರು ಮನೆಯ ವಿಳಾಸಕ್ಕೆ ಕೊರಿಯರ್ ಮಾಡಿದ್ದರು. ಕೊರಿಯರ್‌ನಲ್ಲಿ ಪತ್ತೆಯಾಗಿರುವ ಡೆತ್‌ನೋಟ್ ಈಗ ಪಾಟೀಲ ಕುಟುಂಬದ ಕಾನೂನು ಹೋರಾಟಕ್ಕೆ ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net