

ಸಿಂಧನೂರು: ತಾಲೂಕಿನ ವಿರುಪಾಪುರ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಸಬೇಕೆಂದು ಒತ್ತಾಯಿಸಿ ಕೂಲಿ ಕಾರ್ಮಿಕರು ಮಂಗಳವಾರ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ವಿರುಪಾಪುರ ಶಾಲೆ ವಿದ್ಯಾರ್ಥಿಗಳ ಸಾಧನೆ
ವಿರುಪಾಪುರ ಗ್ರಾಪಂನಿಂದ ಹತ್ತಿಗುಡ್ಡದಲ್ಲಿ ನರೇಗಾ ಯೋಜನೆಯಡಿ 21 ದಿನ ಕೆಲಸ ನಿರ್ವಹಿಸಿದ್ದು, ಈವರೆಗೆ ಹಣ ಪಾವತಿಸಿಲ್ಲ. ಎನ್‌ಎಂಆರ್ ಕೂಡ ಆಗಿಲ್ಲ. ಕೂಲಿ ಪಾವತಿಸುವಲ್ಲಿ ಜೆಇ ಸ್ಪಂದಿಸುತ್ತಿಲ್ಲ. ಜೀವನ ನಡೆಸುವುದು ಕಷ್ಟವಾಗಿದೆ.
ಕೂಲಿ ನಂಬಿ ಬದುಕುವ ನಮಗೆ ಈ ರೀತಿಯ ಅನ್ಯಾಯ ಸರಿಯಲ್ಲ. ಕೂಡಲೇ ಕೂಲಿ ಪಾವತಿಸಬೇಕೆಂದು ಒತ್ತಾಯಿಸಿದರು. ಮೇಟಿ ರಾಘವೇಂದ್ರ ಚಳ್ಳೂರು, ಕಾರ್ಮಿಕರಾದ ಹನುಮೇಶ ರೌಡಕುಂದ, ಪ್ರಕಾಶ, ದುರುಗಪ್ಪ, ಯಲ್ಲಪ್ಪ ನವಲಿ, ದಾಸಪ್ಪ ಇದ್ದರು.
ತಾಂತ್ರಿಕ ದೋಷ ಸರಿಪಡಿಸಿದ ಅಧಿಕಾರಿಗಳು: ವಿರುಪಾಪುರ ಗ್ರಾಪಂಗೆ ತಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ತಾಂತ್ರಿಕ ಸಮಸ್ಯೆಯಿಂದ ಕೂಲಿ ಪಾವತಿ ವಿಳಂಬವಾಗಿದೆ. ಶೀಘ್ರವೇ ಕೂಲಿ ಪಾವತಿಸಲು ಕ್ರಮಕೈಗೊಳ್ಳುವುದಾಗಿ ತಾಪಂ ಎಡಿ ಅಮರಗುಂಡಪ್ಪ ಭರವಸೆ ನೀಡಿದರು. ಈ ವೇಳೆ ಪಿಡಿಒ ಪೂರ್ಣಿಮಾ, ಟಿಎಂಎಸ್ ವೀರೇಶ, ತಾಂತ್ರಿಕ ಸಂಯೋಜಕ ಥಾಮಸ್, ತಾಂತ್ರಿಕ ಸಹಾಯಕ ಥಾಮಸ್ ಇದ್ದರು.