ನರೇಗಾ ಕೂಲಿ 370 ರೂ. ಹೆಚ್ಚಳ

OLYMPUS DIGITAL CAMERA
OLYMPUS DIGITAL CAMERA
Published on

ಬೆಳಗಾವಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಅಕುಶಲ ಕೂಲಿಕಾರರಿಗೆ ಏ.1ರಿಂದ ಪರಿಷತ ಕೂಲಿ ಮೊತ್ತ 349 ರೂ.ದಿಂದ 370 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಜಿಪಂ ಸಿಇಒ ರಾಹುಲ್​ ಶಿಂಧೆ ತಿಳಿಸಿದ್ದಾರೆ. ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಮಾಡಿ 37 ಸಾವಿರ ರೂ. ತಮ್ಮ ಖಾತೆ ನೇರವಾಗಿ ಜಮಾ ಆಗುತ್ತದೆ. ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಕೆಲಸದಲ್ಲಿ ಶೇ.50 ರಿಯಾಯಿತಿ ಇದೆ. ರೈತರು ಕೂಲಿಕಾರರು ಮನೆಯಲ್ಲಿ ದನ, ಕುರಿ, ಕೋಳಿಗಳಿದ್ದರೆ ನರೇಗಾ ಯೋಜನೆಯಡಿ ಶೆಡ್​ಗಳನ್ನು ನಿರ್ಮಿಸಿಕೊಳ್ಳಬಹುದು. ಜತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದ್ದಾರೆ. ಮಾಹಿತಿಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಭೇಟಿ ನೀಡಿ ಹಾಗೂ ಏಕೀಕೃತ ಸಹಾಯವಾಣಿ ಸಂಖ್ಯೆ 82775 06000ಕರೆ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net