

ಮಡಿಕೇರಿ: ಸ್ವಾವಲಂಬಿ ಬದುಕಿಗೆ ನರೇಗಾ ಸಹಕಾರಿ ಎಂದು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಕಾರ್ಯನಿರ್ವಹಿಸುತ್ತ ಬಂದಿದೆ. ಕೊಡಗು ಜಿಲ್ಲೆಯಲ್ಲಿಯೂ ಸಹ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನಿರಂತರ ಕೂಲಿ ಒದಗಿಸುವ ಜೊತೆಗೆ, ಗ್ರಾಮೀಣ ಜನರಿಗೆ ನೆರವಾಗಿದೆ ಎಂದು ತಿಳಿಸಿದ್ದಾರೆ.
ಉದ್ಯೋಗ ಖಾತ್ರಿ ಹೆಸರು ಸೂಚಿಸುವಂತೆ ಈ ಯೋಜನೆ ಗ್ರಾಮೀಣ ಭಾಗದ ಕುಟುಂಬಕ್ಕೆ ಕನಿ?್ಠ ೧೦೦ ದಿನಗಳ ಉದ್ಯೋಗವನ್ನು ಖಾತರಿ ಪಡಿಸುತ್ತದೆ. ಜೊತೆಗೆ ದಿನಕ್ಕೆ ರೂ.೪೯ ಕೂಲಿಯನ್ನು ನೀಡುತ್ತಿದೆ. ಗ್ರಾಮಗಳ ಅಭಿವೃದ್ಧಿಗೆ ಯೋಜನೆಯು ಪೂರಕವಾಗುವಂತೆ ಕಾರ್ಯನಿರ್ವಹಿಸುತ್ತಿದ್ದು ಪ್ರಮುಖವಾಗಿ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಬೇಸಿಗೆ ಪ್ರಾರಂಭವಾಗಿದ್ದು, ಗ್ರಾಮೀಣ ಜನರಿಗೆ ನಿರಂತರ ಉದ್ಯೋಗ ಕೊಡವ ನಿಟ್ಟಿನಲ್ಲಿ ಯೋಜನೆಯು ಸಹಕಾರಿಯಾಗಿದ್ದು, ಕೆಲಸಕ್ಕಾಗಿ ಹತ್ತಿರದ ಗ್ರಾಮ ಪಂಚಾಯಿತಿ ಸಂಪರ್ಕಿಸಬಹುದಾಗಿದೆ ಎಂದು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ತಿಳಿಸಿದ್ದಾರೆ.
ಆ ದಿಸೆಯಲ್ಲಿ ದನದ ಕೊಟ್ಟಿಗೆ ೪ ದನಗಳಿಗೆ-೫೭ ಸಾವಿರ, ಕುರಿ/ ಮೇಕೆ ಕೊಟ್ಟಿಗೆ-೭೦ ಸಾವಿರ, ಕೋಳಿ ಶೇಡ್ ನಿರ್ಮಾಣಕ್ಕೆ ೬೦ ಸಾವಿರ, ಕೊಳವೆ ಬಾವಿ ಮರುಪೂರಕ ಘಟಕ-೪೫ ಸಾವಿರ, ಎರೆಹುಳ ಘಟಕ-೨೦ ಸಾವಿರ, ತೆರೆದ ಬಾವಿ-(ಗರಿ?್ಟ ೬೨ ರಿಂಗ್ ಗಳಿಗೆ) ೧.೫೦ ಲಕ್ಷ, ಹಂದಿ ಕೊಟ್ಟಿಗೆ-೫೭ ಸಾವಿರ, ಅಜೋಲಾ ಘಟಕ- ೧೬ ಸಾವಿರ, ಕೃಷಿ ಹೊಂಡ ನಿರ್ಮಾಣ, ಕಂದಕ ಬದು ನಿರ್ಮಾಣ, ಕಾಳುಮೆಣಸು (೧ ಎಕರೆ) ೧೭ ಸಾವಿರ, ಕೈ ತೋಟ- ೫,೩೧೫, ಅಡಿಕೆ ಕೃಷಿ(೧ಎಕರೆ)-೭೦,೭೭೮, ಕಿತ್ತಳೆ ಕೃಷಿ-(೧ ಎಕರೆ)-೧೫ ಸಾವಿರ ವೈಯಕ್ತಿಕ ಕಾಮಗಾರಿ ಲಾಭ ಪಡೆಯಬಹುದು ಎಂದು ಜಿ.ಪಂ.ಸಿಇಒ ತಿಳಿಸಿದ್ದಾರೆ.