ಗ್ರಾಮೀಣಾಭಿವೃದ್ಧಿಗೆ ನರೇಗಾ ಸಹಕಾರಿ

FotoJet 222
Published on

ಬೂದಿಕೋಟೆ: ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ 100 ದಿನ ಕೆಲಸ ಸಿಗಲಿದ್ದು, ಸರ್ಕಾರ ಇದೀಗ ಕೂಲಿ ಮೊತ್ತವನ್ನು ಸಹ ಹೆಚ್ಚಿಸಿದೆ. ನರೇಗಾ ಕೂಲಿ ಕಾರ್ಮಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗುಲ್ಲಹಳ್ಳಿ ಪಿಡಿಒ ಚಂದ್ರಕಲಾ ತಿಳಿಸಿದರು.

ಹೋಬಳಿಯ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರೇಗಾ ಗ್ರಾಮ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದೀಗ <370 ಕೂಲಿ ನೀಡಲಾಗುತ್ತಿದೆ. ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಭಿಗಳಾಗುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಅ.2ರಿಂದ ಪ್ರತಿ ವಾರ್ಡ್​ನಲ್ಲಿ ಸಭೆ ನಡೆಯಲಿದ್ದು, ಅಲ್ಲಿ ನಿಮ್ಮ ಗ್ರಾಮಕ್ಕೆ ಬೇಕಾಗಿರುವ ಕಾಮಗಾರಿಗಳ ಪಟ್ಟಿ ನೀಡಿ, ಗ್ರಾಮಸ್ಥರು ನೀಡುವ ಬೇಡಿಕೆ ಪಟ್ಟಿಯ ಗ್ರಾಮ ಸಭೆಯಲ್ಲಿ ಮಂಡನೆ ಮಾಡಿಕೊಂಡು ಆ್ಯಕ್ಷನ್​ ಪ್ಲ್ಯಾನ್​ ತಯಾರಿಸುತ್ತೇವೆ. ಆನಂತರ ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಬಹುದು ಎಂದರು.

ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮವಾಗಿ ನರೆಗಾ ಯೋಜನೆಯ ಕಾಮಗಾರಿಗಳು ಜರುಗುತಿದ್ದು, ಇದೇ ರೀತಿ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತಾ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡ್ಯೊಲು ನರೇಗಾ ಯೋಜನೆ ಸಹಕಾರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net