ನರೇಗಾ ದಿನಗೂಲಿ 370 ರೂ.ಗೆ ಹೆಚ್ಚಳ

ಸಂಡೂರು ತಾಲೂಕು ಯು.ರಾಜಾಪುರ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿದರು.
ಸಂಡೂರು ತಾಲೂಕು ಯು.ರಾಜಾಪುರ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿದರು.
Published on

ಸಂಡೂರು: ಉದ್ಯೋಗ ಖಾತ್ರಿ ಯೋಜನೆಯಡಿ ವೈಯುಕ್ತಿಕ ಮತ್ತು ಸಾಮೂಹಿಕ ಕಾಮಗಾರಿ ಕೈಗೊಳ್ಳಬಹುದು ಎಂದು ತಾಪಂ ಇಒ ಮಡಗಿನ ಬಸಪ್ಪ ಹೇಳಿದರು.

ಯು.ರಾಜಾಪುರ ಗ್ರಾಮದದಲ್ಲಿ ಶುಕ್ರವಾರ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಕೆಲಸದ ಅಳತೆ ಕುರಿತು ಎನ್‌ಎಂಎಂಎಸ್ ಆ್ಯಪ್ ಮೂಲಕ ಹಾಜರಾತಿ ಹಾಕಲಾಗುತ್ತಿದೆ. ವೈಯುಕ್ತಿಕ ಕಾಮಗಾರಿಯಾದ ದನ, ಕುರಿ, ಕೋಳಿ ಶೆಡ್, ಎರೆಹುಳು ತೊಟ್ಟಿ, ಕೃಷಿ ಹೊಂಡ, ಬದು, ಅಜೋಲಾ ಘಟಕ, ಮೀನು ಕೃಷಿ ಕೊಳ ನಿರ್ಮಾಣ ಕೈಗೊಳ್ಳಬಹುದು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯಿಂದ ದಾಳಿಂಬೆ, ತೆಂಗು, ಮಾವು, ಸಪೋಟಾ, ಸೀಬೆ, ನುಗ್ಗೆ, ನೇರಳೆ, ಅಂಜೂರ, ಕರಿಬೇವು, ಪಪ್ಪಾಯಿ, ಗುಲಾಬಿ, ಮಲ್ಲಿಗೆ, ಡ್ರಾಗನ್ ಪ್ರೂಟ್ ಸೇರಿದಂತೆ ಇತರ ಬೆಳೆ ಬೆಳೆಯಲು ಸಹಾಯ ಧನ ಪಡೆಯಬಹುದು. ದಿನಗೂಲಿಯನ್ನು 370 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ಉದ್ಯೋಗ ಖಾತ್ರಿ ಎಡಿ ರೇಣುಕಾಚಾರ್ಯ ಸ್ವಾಮಿ, ಪಿಡಿಒ ರಾಮಪ್ಪ ಮಾಳಗಿ, ತಾತ್ರಿಕ ಸಂಯೋಜಕ ಕೇಶವಮೂರ್ತಿ, ಐಸಿಸಿ ಸಂಯೋಜಕ ವೆಂಕಪ್ಪ, ತಾತ್ರಿಕ ಸಹಾಯಕ ಯಶವಂತ್ ಕುಮಾರ್, ಪ್ರಮುಖರಾದ ರಾಮಸ್ವಾಮಿ, ಹುಲಿಗೆಮ್ಮ, ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net