ನರೇಗಾ ಶೇ.100 ಅನುಷ್ಠಾನಕ್ಕೆ ಪ್ರಯತ್ನಿಸಿ

28-DVD-2
ದೇವದುರ್ಗದಲ್ಲಿ ನರೇಗಾ ಕಾಯಕ ಬಂಧುಗಳಿಗೆ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ನರೇಗಾ ಪರಿಕರ ನೀಡಲಾಯಿತು. ತಾಪಂ ಇಒ ಬಸವರಾಜ ಹಟ್ಟಿ, ಎಡಿ ಅಣ್ಣರಾವ್, ಸಮೂಹ ಸಂಸ್ಥೆ ನಿರ್ದೇಶಕ ಎಸ್.ಎಸ್.ಘಂಟಿ, ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕಿ ಮಹೇಶ್ವರಿ, ಪ್ರಮುಖರಾದ ಮುದ್ದರಂಗಪ್ಪ, ಬೆಟ್ಟನಗೌಡ ಇದ್ದರು.
Published on

ದೇವದುರ್ಗ: ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾಯಕ ಬಂಧುಗಳಿಗೆ ಅಗತ್ಯ ತರಬೇತಿ ನೀಡಿದ್ದು, ಸದ್ಬಳಕೆ ಮಾಡಿಕೊಂಡು ಶೇ.100 ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಪಂ ಇಒ ಬಸವರಾಜ ಹಟ್ಟಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ನರೇಗಾ ಕಾಯಕ ಬಂಧುಗಳ ತರಬೇತಿ ಶಿಬಿರ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ತಾಪಂ ಸಹಾಯಕ ನಿರ್ದೇಶಕ ಅಣ್ಣರಾವ್ ಮಾತನಾಡಿ, ನರೇಗಾ ಯೋಜನೆಯನ್ನು ಒಂದು ಕುಟುಂಬ ಜೀವತಾವಧಿಯಲ್ಲಿ 5ಲಕ್ಷ ರೂ.ವರೆಗೂ ಕಾಮಗಾರಿ ಲಾಭವನ್ನು ಪಡೆಯಬಹುದು.

ಜಲ, ಮಣ್ಣು ಮತ್ತು ಪರಿಸರ ಸಂರಕ್ಷಣೆಯ ಕಾಮಗಾರಿ ಮಾಡಿದ್ದಲ್ಲಿ ಮುಂದಿನ ಪೀಳಿಗೆಗೆ ಸಹಾಯವಾಗಲಿದೆ. ಕಾಯಕ ಬಂಧಗಳು ಕಾಮಗಾರಿ ಸ್ಥಳದಲ್ಲಿ ಶೇ.100 ಹಾಜರಾತಿ ಆಗುವಂತೆ ನೋಡಿಕೊಳ್ಳಬೇಕು ಎಂದರು ಕಾಯಕ ಬಂಧುಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಸಮೂಹ ಸಂಸ್ಥೆ ನಿರ್ದೇಶಕ ಎಸ್.ಎಸ್.ಘಂಟಿ, ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕಿ ಮಹೇಶ್ವರಿ, ಪ್ರಮುಖರಾದ ಮುದ್ದರಂಗಪ್ಪ, ಬೆಟ್ಟನಗೌಡ, ರಾಜ್ ಮಹ್ಮದ್, ಮೌಲಾಸಾಬ್, ವೆಂಕಟೇಶ್, ಜಯಲಕ್ಷ್ಮೀ, ನಿರ್ಮಲಾ, ಅಮರೇಶ, ತಾಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net