ಎನ್‌ಆರ್‌ಬಿಸಿ ವಾರಾಬಂದಿ ಮುಂದುವರಿಸಿ

25-10-Shiva-2
ನಾರಾಯಣಪುರ ಬಲದಂಡೆ ಕಾಲುವೆಗೆ ವಾರಬಂದಿ ಪ್ರಕಾರ ನೀರು ಹರಿಸುವಂತೆ ಒತ್ತಾಯಿಸಿ ರಾಯಚೂರಿನ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಪದಾಕಾರಿಗಳಾದ ಬೂದಯ್ಯಸ್ವಾಮಿ, ರಮೇಶ ಅಬಕಾರಿ, ಉಮ್ಮಣ್ಣ ನಾಯಕ, ರವಿಕುಮಾರ ಗಬ್ಬೂರು ಇದ್ದರು.
Published on

ರಾಯಚೂರು: ನಾರಾಪುರಣ ಬಲದಂಡೆ ಕಾಲುವೆಗೆ ನೀರು ಹರಿಸಲು ವಾರಾಬಂದಿ ಪದ್ಧತಿ ರದ್ದುಪಡಿಸಿ ನಿರಂತರವಾಗಿ ನೀರು ಹರಿಸುವ ನಿರ್ಧಾರವನ್ನು ಕೈಕೊಳ್ಳಲಾಗಿದ್ದು, ನಿರ್ಧಾರವನ್ನು ಕೈಬಿಟ್ಟು ವಾರಾಬಂದಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಬುಧವಾರ ಮನವಿ ಸಲ್ಲಿಸಿ, ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆಯಿದ್ದು, ಕಾಲುವೆಗೆ ನಿರಂತರ ನೀರು ಹರಿಸುವುದರಿಂದ ರೈತರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಲಿದೆ ಎಂದರು.
ಆಲಮಟ್ಟಿಯಲ್ಲಿ ನಡೆದ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ವಾರಾಬಂದಿಯಂತೆ ಉಪ ಕಾಲುವೆಗಳಿಗೆ 10 ದಿನ ನೀರು ಬಂದ್ ಮಾಡಿ 14 ದಿನ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ನಂತರ ಜಲಾಶಯಕ್ಕೆ ನೀರು ಹರಿದು ಬಂದಿದ್ದರಿಂದ ನಿರ್ಣಯವನ್ನು ಬದಲಾಯಿತಿ ಉಪ ಕಾಲುವೆಗಳಿಗೆ 8 ದಿನ ನೀರು ಬಂದ್ ಮಾಡಿ 14 ದಿನ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಅ.14 ರಿಂದ ನ.18ರವರೆಗೆ ಉಪ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಲು ತೀರ್ಮಾನ ಕೈಗೊಂಡಿರುವುದು ಅವೈಜ್ಞಾನಿಕವಾಗಿದ್ದು, ವಾರಾಬಂದಿ ಮುಂದುವರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಪದಾಕಾರಿಗಳಾದ ಬೂದಯ್ಯಸ್ವಾಮಿ, ರಮೇಶ ಅಬಕಾರಿ, ಉಮ್ಮಣ್ಣ ನಾಯಕ, ರವಿಕುಮಾರ ಗಬ್ಬೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net