ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸವಾರಗೆ ಗಾಯ

7 NRD -2 TIPPER DIKKI
Published on

ನರಗುಂದ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದ್ದರಿಂದ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಅಂಚೆ ಕಚೇರಿ ಬಳಿ ಸೋಮವಾರ ಸಂಭವಿಸಿದೆ. ಪಟ್ಟಣದ ಲೋಧಿಗಲ್ಲಿ ಬಡಾವಣೆಯ ಮುನ್ನಾ ಸಕಲಿ ಗಾಯಗೊಂಡ ಸವಾರ.
ಈತ ಅಂಚೆ ಕಚೇರಿಯಿಂದ ಗಣೇಶ ಟಿಫನ್ಸ್ ಬಳಿಯಿರುವ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಕೊಣ್ಣೂರಿನಿಂದ ನವಲಗುಂದ ಕಡೆಗೆ ತೆರಳುತ್ತಿದ್ದ ಮರಳು ತುಂಬಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನ ಟಿಪ್ಪರ್‌ನ ಮುಂದಿನ ಚಕ್ರದಡಿ ಸಿಲುಕಿದೆ. ಮರಳಿನ ಟಿಪ್ಪರ್ ಸವಾರನ ಮೇಲೆ ಹಾಯ್ದಿದ್ದರಿಂದ ಆತನ ಎರಡೂ ಕಾಲುಗಳು ಮುರಿದಿವೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಟಿಪ್ಪರ್ ಹಾಗೂ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net