ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​. ಸಂತೋಷ್​ ಆತ್ಮಹತ್ಯೆ ಯತ್ನ: ಪತ್ನಿ ಜಾಹ್ನವಿ ಹೇಳಿದ್ದೇನು?

NR Santhosh
Published on

ಬೆಂಗಳೂರು: ಸಿಎಂ ಬಿ.ಎಸ್​. ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಎನ್​. ಆರ್​. ಸಂತೋಷ್​ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಜಾಹ್ನವಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಬೆಳಗ್ಗೆಯಿಂದ ಸ್ವಲ್ಪ ಬೇಜಾರಲ್ಲಿದ್ದರು. ಸಂಜೆ ಹೊರಗಡೆ ಹೋಗಿ 7 ಘಂಟೆಗೆ ಮನೆಗೆ ಬಂದರು. ಊಟಕ್ಕೆ ಏನ್ಮಾಡಲಿ ಅಂತ ಕೇಳಲಿಕ್ಕೆ ಹೋದಾಗ ಅವರು ಪ್ರಜ್ಞೆ ತಪ್ಪಿದರು. ಕೂಡಲೇ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ವಿ ಎಂದಿದ್ದಾರೆ.

ಸ್ವಲ್ಪ ರಾಜಕೀಯದಲ್ಲಿ ಅಸಮತೋಲನ ಆಗಿತ್ತು. ಅದನ್ನು ಮನಸ್ಸಿಗೆ ತೆಗೆದುಕೊಂಡಿದ್ದಾರಷ್ಟೆ, ನಾವು ಕೌಟುಂಬಿಕವಾಗಿ ತುಂಬಾ ಚೆನಾಗಿದ್ದೇವೆ. ಡಾಕ್ಟರ್ ಜತೆ ಮಾತಾಡಿದ್ದೀವಿ ಬೆಳಗ್ಗೆ ಅಷ್ಟೊತ್ತಿಗೆ ಹುಷಾರಾಗ್ತಾರೆ ಎಂದು ವೈದ್ಯರು ತಿಳಿಸಿದ್ದಾರೆಂದರು.

ಇನ್ನು ವೈದ್ಯರ ಮೂಲಗಳ ಪ್ರಕಾರ ಸಂತೋಷ್​ ಇಂದು ಸಂಜೆಯಷ್ಟರಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net