ಸೂಡಿ ಪಿಎಚ್‌ಸಿಗೆ ಎನ್‌ಕ್ಯೂಎಎಸ್ ಮಾನ್ಯತೆ

26 GJD
Published on

ಗಜೇಂದ್ರಗಡ: ಉತ್ತಮ ಆರೋಗ್ಯ ಸೇವೆ ಹಾಗೂ ಸೌಲಭ್ಯಗಳಿಗಾಗಿ ತಾಲೂಕಿನ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡ (ಎನ್‌ಕ್ಯೂಎಎಸ್) ಪ್ರಮಾಣಪತ್ರ ಲಭಿಸಿದೆ.

ಈ ಆರೋಗ್ಯ ಕೇಂದ್ರ ಖಾಸಗಿ ಆಸ್ಪತ್ರೆ, ತಾಲೂಕಾಸ್ಪತ್ರೆಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸ್ವಚ್ಛತೆ, ಶುಚಿತ್ವಕ್ಕೆ ಕೊರತೆ ಇಲ್ಲ. ಗುಣಮಟ್ಟದ ಚಿಕಿತ್ಸಾ ಸೌಲಭ್ಯವಿದೆ. ಸಿಬ್ಬಂದಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಸೇವೆ ಗಮನಿಸಿ ಈಗಾಗಲೇ ಕಾಯಕಲ್ಪ ಪ್ರಶಸ್ತಿ ಸಂದಿದಿ. ಈಗ ಎನ್.ಕ್ಯೂ.ಎ.ಎಸ್ ಮಾನ್ಯತೆ ಸಿಕ್ಕಿರುವುದಕ್ಕೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಈ ಮಾನ್ಯತೆ ಕೆಲವೇ ಕೆಲವು ಸರ್ಕಾರಿ ಆಸ್ಪತ್ರೆಗಳಿಗೆ ಲಭಿಸಿದೆ. ನಮ್ಮ ಸೂಡಿ ಪಿಎಚ್‌ಸಿಗೂ ಮಾನ್ಯತೆ ದೊರೆತಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಆಸ್ಪತ್ರೆ ಸಿಬ್ಬಂದಿಯ ಶ್ರಮದಿಂದ ಈ ಗೌರವ ದೊರಕಿದೆ. ಮುಂದೆಯೂ ಉತ್ತಮ ಆರೋಗ್ಯ ಸೇವೆ ನೀಡಲು ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಶ್ರಮಿಸಲಿದ್ದಾರೆ ಎನ್ನುತ್ತಾರೆ ಆಡಳಿತ ವೈದ್ಯಾಧಿಕಾರಿ ಡಾ. ಶರಣು ಗಾಣಿಗೇರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net