ಗೌರಿ-ಗಣೇಶೊತ್ಸದ ಆಮಂತ್ರಣ ಪತ್ರ ಬಿಡುಗಡೆ

5.npk-01
Published on

ನಾಪೋಕ್ಲು: ಇಲ್ಲಿನ ಇಂದಿರಾನಗರದ ವಿವೇಕಾನಂದ ಸಂಘದ 19 ನೇ ವರ್ಷದ ಗೌರಿ-ಗಣೇಶೋತ್ಸವದ ಆಮಂತ್ರಣ ಪತ್ರವನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಇಂದಿರಾನಗರದಲ್ಲಿ ಸಂಘದ ಅಧ್ಯಕ್ಷ ಸುದೀಪ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ ಮತ್ತು ಮಾಜಿ ಸೈನಿಕ ಕೊಂಡಿರ ಗಣೇಶ ಅನಾವರಣ ಮಾಡಿದರು.
ಸಂಘದ ಉಪಾಧ್ಯಕ್ಷ ಯು.ಕೆ ಶಶಿ, ಕಾರ್ಯದರ್ಶಿ ಸಂದೇಶ, ಖಜಾಂಜಿ ಡಿ.ಆರ್. ಜಲೇಂದ್ರ. ನಿರ್ದೇಶಕರಾದ ಅನಿಲ್, ಗಣೇಶ, ಪ್ರಕಾಶ್, ಪಟ್ಟಾಭಿ ಪ್ರಕಾಶ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net